ನವದೆಹಲಿ: ಆಗಸ್ಟ್ 11 ರಂದು ನಡೆಸಲು ನಿಗದಿಯಾಗಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಸ್ನಾತಕೋತ್ತರ ಪರೀಕ್ಷೆ (NEET PG 2024) ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಹಾಗಾಗಿ ನಿಗದಿಯಂತೆ ಆಗಸ್ಟ್ 11ರಂದು ಪರೀಕ್ಷೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನ್ಯಾಯಪೀಠವು ಪರೀಕ್ಷೆ ನಡೆಯುವ ಒಂದೆರಡು ದಿನಗಳ ಮೊದಲು ಪರೀಕ್ಷೆಯನ್ನು ಮುಂದೂಡಲು ಆದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
“ಈಗ ನೀಟ್ ಪಿಜಿಯನ್ನು ಮುಂದೂಡಲಾಗುತ್ತಿದೆಯೇ? ಅಂತಹ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಬಹುದು. ಇತ್ತೀಚಿನ ದಿನಗಳಲ್ಲಿ ಜನರು ಪರೀಕ್ಷೆಯನ್ನು ಮುಂದೂಡುವಂತೆ ಕೇಳಲು ಬರುತ್ತಾರೆ” ಎಂದು ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿತು.