ಮೈಸೂರು : ಮೈಸೂರಿನ ಕುಸ್ತಿ ಲೋಕದ ಹೆಸರಾಂತ ಪೈಲ್ವಾನ್ ಟೈಗರ್ ಬಾಲಾಜಿ (67) ಅವರು ನಿಧನರಾಗಿದ್ದಾರೆ.
ಟೈಗರ್ ಬಾಲಾಜಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಟೈಗರ್ ಬಾಲಾಜಿ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 350ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿ, ಅನೇಕ ಪ್ರಶಸ್ತಿ ಹಾಗೂ ಗೌರವಗಳನ್ನು ಮುಡಿಗೇರಿಸಿಕೊಂಡಿದ್ದರು.
ಟೈಗರ್ ಬಲಾಜಿ ಅವರು ದಸರಾ ಸಂದರ್ಭದಲ್ಲಿ ಅರಮನೆಯ ಮುಂಭಾಗ ನಡೆಯುವ ಈ ವಿಶೇಷ ಕಾಳಗಕ್ಕಾಗಿ ಪೈಲ್ವಾನರನ್ನು ತಯಾರು ಮಾಡುವ ಜವಾಬ್ದಾರಿಯನ್ನು ದಶಕಗಳಿಂದ ನಿಭಾಯಿಸುತ್ತಿದ್ದರು. ಜಟ್ಟಿಗಳಿಗೆ ತರಬೇತಿ ನೀಡಿ, ಈ ಪಾರಂಪರಿಕ ಕಲೆ ಜೀವಂತವಾಗಿರುವಂತೆ ನೋಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಯೋಸಹಜ ಕಾಯಿಲೆ ಹಾಗೂ ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಾಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧರಾಗಿದ್ದಾರೆ.








