ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಶುಲ್ಕ ದರ ಹೆಚ್ಚಳ ಮಾಡಲಾಗಿದ್ದು, ಆಗಸ್ಟ್ 1ರಿಂದ ಹೊಸ ದರ ಜಾರಿಯಾಗಲಿದೆ.
ಮೃಗಾಲಯದ ನಿರ್ವಹಣಾ ವೆಚ್ಚ ಹೆಚ್ಚಳವಾದ ಹಿನ್ನೆಲೆಯಲ್ಲಿ ಶೇ.20ರಷ್ಟು ದರ ಏರಿಕೆ ಮಾಡಲಾಗಿದೆ. ಜುಲೈ 10ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ಶೇ 20%ರಷ್ಟು ಹೆಚ್ಚಳ ಮಾಡಿ ದರಗಳನ್ನು ಪರಿಷ್ಕರಣೆ ಮಾಡಲು ಅನುಮೋದನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಮೃಗಾಲಯ ಪ್ರಾಧಿಕಾರವು ಜು.10ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿರುವಂತೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶಶುಲ್ಕ/ಇನ್ನಿತರೆ ದರಗಳನ್ನು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಈ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
ಹೊಸ ದರ ಪಟ್ಟಿ ಹೀಗಿದೆ:
1) ಮೃಗಾಲಯ
ವಯಸ್ಕರಿಗೆ – 120 ರೂ.
ಮಕ್ಕಳಿಗೆ (5ರಿಂದ 12 ವರ್ಷ )- 60 ರೂ.
ಮೃಗಾಲಯ ಹಾಗೂ ಕಾರಂಜಿ ಕೆರೆ ಕಾಂಬೋ ವಯಸ್ಕರಿಗೆ – 150 ರೂ.
ಮೃಗಾಲಯ ಹಾಗೂ ಕಾರಂಜಿಕೆರೆ ಕಾಂಬೋ ಮಕ್ಕಳಿಗೆ – 80 ರೂ.
ಕಾರಂಜಿ ಕೆರೆಯ ವಯಸ್ಕರಿಗೆ – 60 ರೂ.
ಕಾರಂಜಿ ಕೆರೆಯ ಮಕ್ಕಳಿಗೆ 5 ರಿಂದ 12 ವರ್ಷ -30 ರೂ.
ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ
1) ಎಲ್ಕೆಜಿ ಯುಕೆಜಿ ಮಕ್ಕಳಿಗೆ ಉಚಿತ
2) ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ -40 ರೂ.
3) 8-12 ತರಗತಿಯ ವಿದ್ಯಾರ್ಥಿಗಳಿಗೆ – 50 ರೂ.
4) 50 ವಿದ್ಯಾರ್ಥಿಗಳ ತಂಡ ಹಾಗೂ ಇಬ್ಬರು ಶಿಕ್ಷಕರಿಗೆ – 50 ರೂ.
ಬ್ಯಾಟರಿ ಚಾಲಿತ ವಾಹನದ ಟಿಕೆಟ್ ದರ
1) ವಯಸ್ಕರಿಗೆ :-240 ರೂ.
2) ಮಕ್ಕಳಿಗೆ (ಐದರಿಂದ 12 ವರ್ಷ ) ಹಾಗೂ ಹಿರಿಯ ನಾಗರಿಕರಿಗೆ – 180 ರೂ.