ಮೈಸೂರು : ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಛಾವಣಿ ಕುಸಿತವಾಗಿದೆ ಎಂದು ವರದಿಯಾಗಿದೆ.ಅರಮನೆಯ ವರಹಾ ಗೇಟ್ ಮುಖ್ಯದ್ವಾರದ ಮೇಲ್ಚಾವಣಿ ಕುಸಿದಿದೆ.
ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದೆ. ಅರಮನೆಯ ವರಹಾ ಗೇಟ್ ಮುಖ್ಯದ್ವಾರದ ಮೇಲ್ಚಾವಣಿ ಕುಸಿದಿದೆ.
ಜನರು ಇಲ್ಲದ ವೇಳೆ ಮೇಲ್ಚಾವಣಿ ಕುಸಿದಿದ್ದರಿಂದ ಅನಾಹುತ ತಪ್ಪಿದೆ. ಸಿಬ್ಬಂದಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಮೇಲ್ಚಾವಣಿ ಕುಸಿದಿದೆ. ಘಟನೆ ಬಳಿಕ ಸಿಬ್ಬಂದಿಗಳು ಗೇಟ್ ಬಳಿ ಬ್ಯಾರಿಕೇಟ್ ಅಳವಡಿಸಿದ್ದಾರೆ.








