ಚಿತ್ರದುರ್ಗ : ಲಂಚ ಪ್ರಕರಣದಲ್ಲಿ ಜೈಲು ಸೇರಿದ್ದ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು (40) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆಯ ಮುಖ್ಯಾಧಿಕಾರಿ ತಿಮ್ಮರಾಜು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಏಪ್ರಿಲ್ 20 ರಂದು ಲಂಚ ಪಡೆಯುತ್ತಿದ್ದಾಗ ಲೋಕ ಬಲೆ ಬಿದ್ದಿದ್ದ ತಿಮ್ಮರಾಜು. ಬಳಿಕ ಚಿತ್ರದುರ್ಗ ಜೈಲು ಸೇರಿದ್ದರು.
ಜೈಲಿನಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ತಿಮ್ಮರಾಜು ಸಾವನ್ನಪ್ಪಿದ್ದಾರೆ. ಇ-ಖಾತೆ ಮಾಡಿಕೊಡಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಿಮ್ಮರಾಜು ಬಳಿಕ ಪುರಸಭೆ ಸದಸ್ಯ ಎನ್. ಶಾಂತಪ್ಪ ಬಳಿ 25 ಸಾವಿರ ರೂ. ಲಂಚ ಸ್ವೀಕಾರಿಸಿದ್ದರು. ಲಂಚ ಸ್ವೀಕಾರ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು.