ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮೋಸ್ಟ್ ವಾಂಟೇಡ್ ಕಿಡ್ನಾಪರ್ ಬಾಂಬೆ ಸಲೀಂ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಮೋಸ್ಟ್ ವಾಂಟೇಡ್ ಕಿಡ್ನಾಪರ್ ಬಾಂಬೆ ಸಲೀಂ ಸೇರಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಂಬೆ ಸಲೀಂ, ಅನಿಲ್, ಚೇತನ್ ನಾಗೇಶ್, ಬಾಗಪಲ್ಲಿ ಚೇತನ್, ಬಾಬು ರೆಡ್ಡಿ, ವಾಸಿಂ ಹಾಗೂ ಅಸ್ಲಂ ಎಂಬುವರನ್ನು ಬಂಧಿಸಿದ್ದಾರೆ. ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.