ಮಡಿಕೇರಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದ್ದು, ಕೊಡಗು ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ರಾಜ್ಯವನ್ನೇ ತೊರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಕುಶಾಲನಗರ ತಾಲೂಕಿನ ಮೀನುಕೊಲ್ಲಿ ಹಾಡಿಯಲ್ಲಿ ಮಹಿಳೆಯರು ಮರವೇರಿ ಕುಳಿತಿರುವ ಘಟನೆ ನಡೆದಿದೆ. ಹೌದು, ಸಿಬ್ಬಂದಿಗಳ ಕಾಟದಿಂದ ತಪ್ಪಿಸಿಕೊಳ್ಳು ಮಹಿಳೆಯರು ದಟ್ಟ ಅರಣ್ಯದಲ್ಲಿ ಪ್ರತಿನಿತ್ಯವೂ ಮರ ಏರಿ ಕುಳಿತುಕೊಳ್ಳುತ್ತಿದ್ದಾರೆ.
ದಾಸವಾಳ ಪೈಸಾರಿ, ಬೆಳ್ಳಿ ಕಾಲೊನಿ ಈ ಭಾಗಗಳಲ್ಲಿಹಲವಾರು ಜನ ಕೂಲಿ ಕಾರ್ಮಿಕರಿದ್ದಾರೆ. ಇಲ್ಲಿನ ಕೆಲವು ನಿವಾಸಿಗಳು ನಾನಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿಸಲು ಸಾಧ್ಯವಾಗದೆ ಊರು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆದ ಮಹಿಳೆಯರಿಗೆ ಮೈಕ್ರೋ ಫೈನ್ಸಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮೀನುಕೊಲ್ಲಿ ಹಾಡಿಯ ಜನರು ಆರೋಪಿಸಿದ್ದಾರೆ. ಮನಸ್ಸೋ ಇಚ್ಚೇ ಬಡ್ಡಿ ವಿಧಿಸಿರುವುದರಿಂದ ಸಾಲ ಕಟ್ಟಲಾಗುತ್ತಿಲ್ಲ ಹೀಗಾಗಿ ಹಲವರು ಮನೆಗೆ ಬೀಗ ಹಾಕಿ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸಿದ್ದಾರೆ.