ಬೆಂಗಳೂರು : ನಡುರಸ್ತೆಯಲ್ಲೇ ಲಾರಿ ಹೊತ್ತಿ ಉರಿದ ಪರಿಣಾಮ ಟಿವಿಎಸ್ ಕಂಪನಿಯ 40 ಕ್ಕೂ ಹೆಚ್ಚು ಬೈಕ್ ಗಳು ಸುಟ್ಟುಭಸ್ಮವಾಗಿರುವ ಘಟನೆ ನಡೆದಿದೆ.
ತಮಿಳುನಾಡಿನ ಟಿವಿಎಸ್ ಕಂಪನಿಗೆ ಸೇರಿದ ಲಾರಿವೊಂದು ಹೊಸ ಟಿವಿಎಸ್ ಬೈಕ್ ಗಳನ್ನು ಸಾಗಿಸುತ್ತಿದ್ದ ವೇಳೆ ಆನೇಕಲ್ ಬಳಿಯ ಧಮ್ಮರನಹಳ್ಳಿಯಲ್ಲಿ ಏಕಾಏಕಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ 40 ಕ್ಕೂ ಹೆಚ್ಚು ಹೊಸ ಟಿವಿಎಸ್ ಬೈಕ್ ಗಳು ಸುಟ್ಟು ಕರಕಲಾಗಿವೆ.