ವಿಜಯನಗರ : ವಿಜಯನಗರದಲ್ಲಿ ಚರಂಡಿ ಮಿಶ್ರಿತ ಕಲುಷಿತ ನೀರು ಸೇವಿಸಿ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲು ತಾಲೂಕಿನ ಮಾನ್ಯರ ಮಸಲವಾಡದಲ್ಲಿ ನಡೆದಿದೆ. ಚರಂಡಿ ಮಿಶ್ರಿತ ಬೋರ್ ವೆಲ್ ನಿರು ಕುಡಿದು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ವಾಂತಿ ಭೇದಿಯಿಂದ ಬಳಲುತ್ತಿರುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚರಂಡಿ ಮಿಶ್ರಿತ ನೀರು ಪೂರೈಕೆ ಹಿನ್ನೆಲೆಯಲ್ಲಿ ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.