ಪಲ್ನಾಡು: ಖಾಸಗಿ ಬಸ್ ವೊಂದು ಕುರಿ ಹಿಂಡಿನ ಮೇಲೆ ಹರಿದ ಪರಿಣಾಮ ನಡು ರಸ್ತೆಯಲ್ಲೇ 150 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶ ರಾಜ್ಯದ ಪಲ್ನಾಡು ಜಿಲ್ಲೆಯ ಧಾಗೆಪಲ್ಲಿ ಪಟ್ಟಣಂನ ಅಲಂಕಾರ್ ಥಿಯೇಟರ್ ಬಳಿ ಮಾರುತಿ ಟ್ರಾವೆಲ್ಸ್ ಬಸ್ ಕುರಿ ಹಿಂಡಿಗೆ ಡಿಕ್ಕಿ ಹೊಡೆದಿದೆ. ಹೈದರಾಬಾದ್ ನಗರದಿಂದ ಕೊಲ್ಲುವಿಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇದೇ ಘಟನೆಯಲ್ಲಿ 150 ಕುರಿಗಳು ಸಾವನ್ನಪ್ಪಿದ್ದು, ಕುರಿಗಾಹಿ ಮಲ್ಲೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಬೂಬ್‌ನಗರ ಜಿಲ್ಲೆಯ ಧನವಾಡ ಪ್ರದೇಶದಿಂದ ತೆಲಂಗಾಣದ ಧಾಗೆಪಲ್ಲಿ ಮಂಡಲದ ಮದೀನಪಾಡುವಿಗೆ ಕುರಿ ಹಿಂಡು ಹೋಗುತ್ತಿದ್ದಾಗ ಟ್ರಾವೆಲ್ ಬಸ್ ಚಾಲಕ ಈ ದುಷ್ಕೃತ್ಯ ಎಸಗಿದ್ದಾನೆ. ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.