ತಿರುವನಂತಪುರಂ : ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಇದನ್ನು ಐಎಂಡಿ ಅಂದರೆ ಭಾರತ ಹವಾಮಾನ ಇಲಾಖೆ ಶನಿವಾರ ಪ್ರಕಟಿಸಿದೆ. ವಿಶೇಷವೆಂದರೆ ಸಾಮಾನ್ಯವಾಗಿ ಜೂನ್ 1 ರಂದು ಬರುವ ಮಳೆ, 2025 ರಲ್ಲಿ 8 ದಿನಗಳ ಹಿಂದೆಯೇ ಕೇರಳವನ್ನು ತಲುಪಿದೆ.
ಆದರೆ, ಈ ಬಾರಿ ಮುಂಗಾರು ಬೇಗ ಆಗಮಿಸುತ್ತದೆ ಎಂದು ಹವಾಮಾನ ಇಲಾಖೆ ಮೊದಲೇ ಭವಿಷ್ಯ ನುಡಿದಿತ್ತು. ಕಳೆದ ಕೆಲವು ದಿನಗಳಿಂದ ಭಾರತದ ಬಹುತೇಕ ರಾಜ್ಯಗಳು ಮಳೆಯನ್ನು ಎದುರಿಸುತ್ತಿವೆ.
ನೈಋತ್ಯ ಮಾನ್ಸೂನ್ ಇಂದು, ಮೇ 24, 2025 ರಂದು ಕೇರಳವನ್ನು ಪ್ರವೇಶಿಸಿದೆ, ಸಾಮಾನ್ಯವಾಗಿ ಜೂನ್ 1 ರಂದು ಪ್ರಾರಂಭವಾಗಲಿದೆ’ ಎಂದು ಐಎಂಡಿ ಬರೆದಿದೆ. ಇದರಿಂದಾಗಿ, ನೈಋತ್ಯ ಮಾನ್ಸೂನ್ ಸಾಮಾನ್ಯ ದಿನಾಂಕಕ್ಕಿಂತ 8 ದಿನ ಮೊದಲೇ ಕೇರಳವನ್ನು ತಲುಪಿದೆ. 2009 ರ ಮೇ 23 ರಂದು ಕೇರಳಕ್ಕೆ ಮುಂಗಾರು ಆಗಮಿಸಿದ ನಂತರ ಇದೇ ಮೊದಲ ಬಾರಿಗೆ ಇಷ್ಟು ಬೇಗ ಕೇರಳಕ್ಕೆ ಮುಂಗಾರು ಆಗಮಿಸಿದೆ. 2024 ರಲ್ಲಿ, ಮಾನ್ಸೂನ್ ಮೇ 30 ರಂದು ಆಗಮಿಸಿತು.