ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮಾರ್ಚ್ 7 ರಂದು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನ ಶೇಕಡಾ 4 ರಿಂದ 50ಕ್ಕೆ ಹೆಚ್ಚಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತು. ಹೆಚ್ಚಿದ ಡಿಎ ಜನವರಿ 1, 2024 ರಿಂದ ಜಾರಿಗೆ ಬರಲಿದೆ.
ಈ ಭತ್ಯೆಯಿಂದ 49.18 ಲಕ್ಷ ಉದ್ಯೋಗಿಗಳು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕ್ಯಾಬಿನೆಟ್ ನಿರ್ಧಾರಗಳ ಬ್ರೀಫಿಂಗ್ ಸಮಯದಲ್ಲಿ ಹೇಳಿದರು.
ಶೇ.4ರಷ್ಟು ಲಾಭದಿಂದ ಬೊಕ್ಕಸಕ್ಕೆ ವಾರ್ಷಿಕ 12,868.72 ಕೋಟಿ ರೂಪಾಯಿ ವೆಚ್ಚವಾಗಲಿದೆ.
#WATCH | Union Cabinet approves hike in Dearness Allowance to govt employees and Dearness Relief to pensioners by 4% from January 1, 2024, announces Union Minister Piyush Goyal. pic.twitter.com/IsWUnwBGHW
— ANI (@ANI) March 7, 2024
ಅಕ್ಟೋಬರ್ 2023 ರಲ್ಲಿ, 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಜುಲೈ 1, 2023 ರಿಂದ ಜಾರಿಗೆ ಬರುವಂತೆ ಸರ್ಕಾರವು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಶೇಕಡಾ 4 ರಿಂದ 46 ಕ್ಕೆ ಹೆಚ್ಚಿಸಿತ್ತು. ಡಿಆರ್ ಮತ್ತು ಡಿಎ ಹೆಚ್ಚಳದಿಂದ ಉಂಟಾಗುವ ಸಂಚಿತ ಆರ್ಥಿಕ ಪರಿಣಾಮವನ್ನು ವಾರ್ಷಿಕವಾಗಿ 12,857 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಇನ್ನು ಇದರ ಜೊತೆಗೆ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್’ಗೆ 300 ರೂ.ಗಳ ಸಬ್ಸಿಡಿಯನ್ನು ಮಾರ್ಚ್ 31, 2025 ರವರೆಗೆ ಒಂದು ವರ್ಷ ವಿಸ್ತರಿಸಿದೆ.
ಅಂದ್ಹಾಗೆ, ಅಕ್ಟೋಬರ್ನಲ್ಲಿ, ಸರ್ಕಾರವು ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನ ಪ್ರತಿ ಎಲ್ಪಿಜಿ ಸಿಲಿಂಡರ್’ಗೆ 200 ರೂ.ಗಳಿಂದ 300 ರೂ.ಗೆ ಹೆಚ್ಚಿಸಿತ್ತು.
ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ, ಎಲ್ಪಿಜಿ ಸಿಲಿಂಡರ್’ಗಳ ಮೇಲಿನ ‘ಸಬ್ಸಿಡಿ’ ವಿಸ್ತರಣೆ
BREAKING : ಉಜ್ವಲ ಯೋಜನೆಯಡಿ ‘LPG ಸಿಲಿಂಡರ್ ಮೇಲಿನ 300 ರೂ.ಗಳ ಸಬ್ಸಿಡಿ’ ಒಂದು ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ
BREAKING : 5 ವರ್ಷಗಳ ಅವಧಿಗೆ 10,371.92 ಕೋಟಿ ರೂ.ಗಳ ವೆಚ್ಚದ ‘ಇಂಡಿಯಾ ಎಐ ಮಿಷನ್’ಗೆ ಕೇಂದ್ರ ಸರ್ಕಾರ ಅನುಮೋದನೆ