ಧಾರವಾಡ : ಕಲಘಟಗಿ ತಾಲೂಕಿನ ಗಳಗಿ ಗ್ರಾಮ ಪಂಚಾಯತಿಯ ಹಿಂದಿನ ಪಿಡಿಓಯಾಗಿದ್ದ ಪ್ರಸ್ತುತ ಉಗ್ನಿಕೇರಿ ಪಿಡಿಓ ಆಗಿರುವ ಅಬ್ದುಲ್ರಂಜಾಕ್ ಎಚ್. ಮನಿಯಾರ ಅವರನ್ನು ಕರ್ತವ್ಯಲೋಪ ಹಾಗೂ ಹಣಕಾಸು ದುರಪಯೋಗ ಮಾಡಿದ್ದಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಸೆಪ್ಟೆಂಬರ 2 ರಂದು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
2024-25 ಹಾಗೂ 2025-26ನೇ ಸಾಲುಗಳಲ್ಲಿ ಗ್ರಾಮ ಪಂಚಾಯತಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗಿರುವ ಕುಡಿಯುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ಬಾಕಿ ಮೊತ್ತವನ್ನು ಎಸ್ಕ್ರೋ ಖಾತೆಯಿಂದ ಪಾವತಿಸುವ ಕುರಿತು ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ಸುತ್ತೋಲೆಗಳಲ್ಲಿ ತಿಳಿಸಲಾಗಿದ್ದರೂ ಸಹ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ರದಜಾಕ ಎಚ್. ಮನಿಯಾರ ಅವರು ಸರಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪವೆಸಗಿರುತ್ತಾರೆ.
ಆದ್ದರಿಂದ ಕರ್ನಾಟಕ ನಾಗರೀಕ ಸೇವಾ ನಿಯಮಗಳು (ವರ್ಗಿಕರಣ ನಿಯಂತ್ರಣ ಮತ್ತು ಅಪೀಲು) 1957 ರ ನಿಯಮ 10 (1) ಡ ಪ್ರಕಾರ ಗ್ರಾಮಪಂಚಾಯತ ಪಿಡಿಓ ಅಬ್ದುಲ್ರಳಜಾಕ್ ಎಚ್. ಮನಿಯಾರ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೋಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.