ಬೆಂಗಳೂರು : ಬೆಂಗಳೂರಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದ್ದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕಾರು ಜಖಂಗೊಳಿಸರುವ ಘಟನೆ ನಡೆದಿದೆ.
ಬೆಂಗಳೂರಿನ ಬ್ಯಾಡರಹಳ್ಳಿಯ ತುಂಗಾನಗರದಲ್ಲಿ ಈ ಘಟನೆ ನಡೆದಿದ್ದು, ಶಿವಲಿಂಗೇಗೌಡ ಎಂಬುವರ ಮನೆ ಮುಂದೆ ಕುಳಿತು ಕಿಡಿಗೇಡಿಗಳು ಮದ್ಯ ಸೇವನೆ ಮಾಡುತ್ತಿದ್ದರು. ಹೀಗಾಗಿ ಶಿವಲಿಂಗೇಗೌಡ ಇಲ್ಲಿ ಮದ್ಯ ಸೇವನೆ ಮಾಡಬೇಡಿ ಎಂದು ಹೇಳಿದಕ್ಕೆ ಕಿಡಿಗೇಡಿಗಳು ಶಿವಲಿಂಗೇಗೌಡರ ಮೇಲೆ ಹಲ್ಲೆ ಮಾಡಿ, ಸಿಮೆಂಟ್ ಇಟ್ಟಿಗೆ ತೆಗೆದುಕೊಂಡು ಮನೆ ಮುಂದೆ ನಿಂತಿದ್ದ ಇನೋವಾ ಕಾರು ಸೇರಿದಂತೆ ಅಕ್ಕಪಕ್ಕದ ವಾಹನಗಳನ್ನು ಜಖಂಗೊಳಿಸಿದ್ದಾರೆ.
ಸದ್ಯ ಕಿಡಿಗೇಡಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.