ಬೆಂಗಳೂರು : ಸಚಿವ ಕೃಷ್ಣಬೈರೇಗೌಡ ನಾಪತ್ತೆ ಎಂದು ಪೋಸ್ಟರ್ ಹಿನ್ನೆಲೆ. ಪೋಸ್ಟರ್ ಹಾಕಿದವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ರಸ್ತೆ ಬದಿ ಟ್ರಾನ್ಸ್ಫರ್ಮರ್ಗಳ ಮೇಲೆ ಭಿತ್ತಿ ಪತ್ರಗಳನ್ನ ಅಂಟಿಸಿ ನಗರದ ಸೌಂದರ್ಯಕ್ಕೆ ದಕ್ಕೆ ತರಲಾಗಿದೆ.. ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬ್ಯಾಟರಾಯನಪುರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ದೂರು ನೀಡಿದ್ದಾರೆ.
ಭಿತ್ತಿ ಪತ್ರ ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು, ಅಮೃತಹಳ್ಳಿ ಪೊಲೀಸರು ದೂರು ಪಡೆದು ಎಫ್ಐಆರ್ ದಾಖಲಿಸಿದ್ದಾರೆ.








