Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೋಬೋ ಡಾಗ್ ವಿವಾದ: ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಕ್ಕಾಗಿ ಮನವಿ ಮಾಡಿದ ಗಲ್ಗೋಟಿಯಾಸ್ ವಿವಿ ಪ್ರಾಧ್ಯಾಪಕಿ ನೇಹಾ ಸಿಂಗ್!

19/02/2026 11:26 AM

ನೀವು ‘ಪ್ರಧಾನಿ ಮೋದಿ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿದ್ರೆ ನಿಮ್ಮ ಸಮಸ್ಯೆ ಕ್ಲಿಯರ್ !

19/02/2026 11:24 AM

ರಾಜ್ಯದ ಜನತೆಯ ಗಮನಕ್ಕೆ :`ವಂಶ ವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

19/02/2026 11:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ 1-8ನೇ ತರಗತಿ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ `ಬಿಸಿಯೂಟ’ : ಸರ್ಕಾರದಿಂದ ಮಹತ್ವದ ಅದೇಶ.!
KARNATAKA

BREAKING : ರಾಜ್ಯದ 1-8ನೇ ತರಗತಿ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ `ಬಿಸಿಯೂಟ’ : ಸರ್ಕಾರದಿಂದ ಮಹತ್ವದ ಅದೇಶ.!

By kannadanewsnow5711/02/2025 11:59 AM

ಬೆಂಗಳೂರು : 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮಾಂಕ (1)ರಲ್ಲಿ 2024-25ನೇ ಸಾಲಿಗಾಗಿ ಪಂಚಾಯತ್‌ಗಳಿಗೆ ಒದಗಿಸಲಾಗಿರುವ ಹಣದ ವಿವರಗಳಿಗೆ ಸಂಬಂಧಿಸಿದ ಸಂಪುಟಗಳು-1.2.3 ಮತ್ತು 4ರಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು ಅನುಷ್ಠಾನ ಮಾಡಲು ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕೆಳಕಂಡಂತೆ ಅನುದಾನವನ್ನು ಒದಗಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (2) ರಲ್ಲಿ ಸರ್ಕಾರದ ಆದೇಶದಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆಯ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ರಾಜ್ಯ ಯೋಜನೆ ಕ್ಷೀರಭಾಗ್ಯ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ: 2202-00-101-0-18 (2202-01-196-1-02-300) 2 : 324 ಗೌರವ ಧನ ರಡಿ ನಿಗದಿಯಾಗಿರುವ ರೂ.30300.00 ಲಕ್ಷಗಳ ಅನುದಾನದಿಂದ 2024-25ನೇ ಸಾಲಿನಲ್ಲಿ ಆಗಸ್ಟ್-2024 ರಿಂದ ಅಕ್ಟೋಬರ್-2024ರ ವರೆಗೆ 03 ತಿಂಗಳ ಅವಧಿಯ ಗೌರವ ಸಂಭಾವನೆವನ್ನು ಪಾವತಿಸಲು ಕೇಂದ್ರದ ಪಾಲಿನ ಅನುದಾನ ರೂ.2039.71 ಲಕ್ಷಗಳು, ರಾಜ್ಯದ ಪಾಲಿನ ಅನುದಾನ ರೂ.1359.80 ಲಕ್ಷಗಳು ಹಾಗೂ ಹೆಚ್ಚುವರಿ ರಾಜ್ಯದ ಪಾಲಿನ ಅನುದಾನ ರೂ.8973.51 ಲಕ್ಷಗಳನ್ನು ಒಳಗೊಂಡಂತೆ ಒಟ್ಟಾರೆಯಾಗಿ ರೂ.12373.02 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಮೇಲೆ ಓದಲಾದ ಕ್ರಮಾಂಕ (3)ರಲ್ಲಿ ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯದ, ಆದೇಶದಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಮೊದಲನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ, ಸದರಿ ಅನುದಾನಕ್ಕೆ ಎದುರಾಗಿ ರೂ.7501.76 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (4)ರಲ್ಲಿ ಸರ್ಕಾರದ ಆದೇಶದಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಮೊದಲನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಹಾಗೂ ರೂ.7501.76 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಮೇಲೆ ಓದಲಾದ ಕ್ರಮಾಂಕ (5)ರಲ್ಲಿನ ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯದ, ಆದೇಶದಲ್ಲಿ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಎರಡನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ, ಸದರಿ ಅನುದಾನಕ್ಕೆ ಎದುರಾಗಿ ರೂ.7501.75 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (6)ರಲ್ಲಿನ ಸರ್ಕಾರದ ಆದೇಶದಲ್ಲಿ, 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆಯನ್ನು (ಮಧ್ಯಾಹ್ನ ಉಪಹಾರ ಯೋಜನೆ) ಅನುಷ್ಠಾನ ಮಾಡಲು ಎರಡನೇ ಕಂತಿನಲ್ಲಿ ಆವರ್ತಕ ವೆಚ್ಚಗಳಿಗೆ (Recurring Expenses) ರೂ.12703.63 ಲಕ್‌ಷಗಳ ಕೇಂದ್ರದ ಪಾಲಿನ ಅನುದಾನವನ್ನು, ಸದರಿ ಅನುದಾನಕ್ಕೆ ಎದುರಾಗಿ ರೂ.7501.75 ಲಕ್ಷಗಳ ರಾಜ್ಯದ ಪಾಲಿನ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿರುವ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತದ ರೂ.7575.00 ಲಕ್ಷಗಳ ರಾಜ್ಯದ ಪಾಲಿನ ಹೆಚ್ಚುವರಿ ಅನುದಾನವನ್ನು (State Top-up Amount) ಒಳಗೊಂಡಂತೆ ಒಟ್ಟಾರೆಯಾಗಿ ರೂ.27780.38 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಮೇಲೆ ಓದಲಾದ ಕ್ರಮಾಂಕ (7)ರಲ್ಲಿನ ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯದ, ಆದೇಶದಲ್ಲಿ 2024-25ನೇ ಸಾಲಿನಲ್ಲಿ ಬರಪೀಡಿತ ಪ್ರದೇಶಗಳಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರೂ 2958.87 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ ಸದರಿ ಅನುದಾನಕ್ಕೆ ಎದುರಾಗಿ ರೂ 1742.74 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (8)ರಲ್ಲಿ ನಿರ್ದೇಶಕರು, ಪ್ರಧಾನ ಮಂತ್ರಿ ಷೋಷಣ ಶಕ್ತಿ ನಿರ್ಮಾಣ ಯೋಜನೆ, ಇವರು 2024-25ನೇ ಸಾಲಿನ ಏಪ್ರಿಲ್-ಮೇ-2024ರ 41 ದಿನಗಳ ಬೇಸಿಗೆ ರಜಾ ಅವಧಿಯಲ್ಲಿ ರಾಜ್ಯದ 31 ಜಿಲ್ಲೆಗಳ ಒಟ್ಟು 223 ಬರಪೀಡಿತ ತಾಲ್ಲುಕುಗಳ ವ್ಯಾಪ್ತಿಯಲ್ಲಿನ 1-8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ. ರೂ.2958.87 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು, ಸದರಿ ಅನುದಾನಕ್ಕೆ ಎದುರಾಗಿ ರೂ.1742.74 ಲಕ್ಷಗಳ ರಾಜ್ಯದ ಪಾಲಿನ ಅನುದಾನವನ್ನು ಹಾಗೂ ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿರುವ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತ 2692.17.مه ಲಕ್ಷಗಳನ್ನು (State Top-up Amount) ಒಳಗೊಂಡಂತೆ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನವನ್ನು ವಿವಿಧ ಲೆಕ್ಕ ಶೀರ್ಷಿಕೆಗಳಡಿ ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಲಾದ ಮೇಲ್ಕಂಡ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರೂ.2958.87 ಲಕ್ಷಗಳ ಕೇಂದ್ರದ ಪಾಲಿನ ಅನುದಾನವನ್ನು, ಸದರಿ ಅನುದಾನಕ್ಕೆ ಎದುರಾಗಿ ರೂ.1742.74 ಲಕ್ಷಗಳ ರಾಜ್ಯದ ಪಾಲಿನ ಅನುದಾನ ಹಾಗೂ ರಾಜ್ಯ ಸರ್ಕಾರದಿಂದ ಭರಿಸಲಾಗುತ್ತಿರುವ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತ ರೂ.2692.17 ಲಕ್ಷಗಳ ರಾಜ್ಯದ ಪಾಲಿನ ಹೆಚ್ಚುವರಿ ಅನುದಾನವನ್ನು (State Top-up Amount) ಒಳಗೊಂಡಂತೆ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನವನ್ನು ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕೆಳಕಂಡಂತೆ ಬಿಡುಗಡೆ ಮಾಡಿ ಆದೇಶಿಸಿದೆ.

BREAKING: Mid-day meal for students of classes 1-8 during summer vacation: State govt
Share. Facebook Twitter LinkedIn WhatsApp Email

Related Posts

ನೀವು ‘ಪ್ರಧಾನಿ ಮೋದಿ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿದ್ರೆ ನಿಮ್ಮ ಸಮಸ್ಯೆ ಕ್ಲಿಯರ್ !

19/02/2026 11:24 AM2 Mins Read

ರಾಜ್ಯದ ಜನತೆಯ ಗಮನಕ್ಕೆ :`ವಂಶ ವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

19/02/2026 11:14 AM2 Mins Read

ಹಾಸನದಲ್ಲಿ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು : ಕುಟುಂಬಸ್ಥರಿಂದ ಕೊಲೆ ಆರೋಪ!

19/02/2026 11:08 AM1 Min Read
Recent News

ರೋಬೋ ಡಾಗ್ ವಿವಾದ: ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಕ್ಕಾಗಿ ಮನವಿ ಮಾಡಿದ ಗಲ್ಗೋಟಿಯಾಸ್ ವಿವಿ ಪ್ರಾಧ್ಯಾಪಕಿ ನೇಹಾ ಸಿಂಗ್!

19/02/2026 11:26 AM

ನೀವು ‘ಪ್ರಧಾನಿ ಮೋದಿ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿದ್ರೆ ನಿಮ್ಮ ಸಮಸ್ಯೆ ಕ್ಲಿಯರ್ !

19/02/2026 11:24 AM

ರಾಜ್ಯದ ಜನತೆಯ ಗಮನಕ್ಕೆ :`ವಂಶ ವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

19/02/2026 11:14 AM

BREAKING: ಸಿಬಿಎಸ್ಇ ಪರೀಕ್ಷೆ ವೇಳೆ ನೋಯ್ಡಾ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ | Bomb threat

19/02/2026 11:09 AM
State News
KARNATAKA

ನೀವು ‘ಪ್ರಧಾನಿ ಮೋದಿ’ಗೆ ದೂರು ನೀಡಬೇಕೇ? ಜಸ್ಟ್ ಹೀಗೆ ಮಾಡಿದ್ರೆ ನಿಮ್ಮ ಸಮಸ್ಯೆ ಕ್ಲಿಯರ್ !

By kannadanewsnow5719/02/2026 11:24 AM KARNATAKA 2 Mins Read

ನೀವು ನಿಮ್ಮ ಸಮಸ್ಯೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಬೇಕಾ? ಹಾಗಿದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ. ನಮಗೆ…

ರಾಜ್ಯದ ಜನತೆಯ ಗಮನಕ್ಕೆ :`ವಂಶ ವೃಕ್ಷ ಪ್ರಮಾಣಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

19/02/2026 11:14 AM

ಹಾಸನದಲ್ಲಿ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು : ಕುಟುಂಬಸ್ಥರಿಂದ ಕೊಲೆ ಆರೋಪ!

19/02/2026 11:08 AM

BIG NEWS : ಮಾ.5 ರಂದು ರಾಜ್ಯ ಗುತ್ತಿಗೆದಾರರಿಂದಲೂ ಮುಷ್ಕರ : ರಾಜ್ಯಾಧ್ಯಕ್ಷ ಆರ್ ಮಂಜುನಾಥ್ ಮಾಹಿತಿ

19/02/2026 11:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.