ಪೂರ್ವ ಇರಾಕ್‌ನ ಕುಟ್ ನಗರದ ಹೈಪರ್‌ಮಾರ್ಕೆಟ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಅವರನ್ನು ಉಲ್ಲೇಖಿಸಿ ಐಎನ್‌ಎ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೈಪರ್ ಮಾರ್ಕೆಟ್ ಮತ್ತು ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಾಸ್‌ಜಿತ್ ಪ್ರಾಂತ್ಯದ ಗವರ್ನರ್ ಮೊಹಮ್ಮದ್ ಅಲ್-ಮಾಯಾಹಿ ಹೇಳಿದ್ದಾರೆ. ಕುಟುಂಬಗಳು ಭೋಜನ ಮಾಡುತ್ತಿದ್ದಾಗ, ಶಾಪಿಂಗ್ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತು ಎಂದು ಅವರು ಹೇಳಿದ್ದಾರೆ. ಅಗ್ನಿಶಾಮಕ ದಳದವರು ಹಲವಾರು ಜನರನ್ನು ರಕ್ಷಿಸಿದರು ಮತ್ತು ಬೆಂಕಿಯನ್ನು ನಂದಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ. ತನಿಖಾ ಫಲಿತಾಂಶಗಳನ್ನು 48 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.
Massive fire in Iraq