ಅಮೃತಸರ : ಅಮೃತಸರದಿಂದ ಸಹರ್ಸಾಗೆ ತೆರಳುತ್ತಿದ್ದ `ಗರೀಬ್ ರಥ್ ಎಕ್ಸ್ಪ್ರೆಸ್’ ರೈಲಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಪಂಜಾಬ್ನ ಸಿರ್ಹಿಂದ್ ನಿಲ್ದಾಣದಲ್ಲಿ ಇಂದು ಮುಂಜಾನೆ ಅಮೃತಸರ-ಸಹರ್ಸಾ ರೈಲು ಸಂಖ್ಯೆ 12204 ರ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯನ್ನು ನಂದಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಪಂಜಾಬ್ನ ಸಿರ್ಹಿಂದ್ ರೈಲು ನಿಲ್ದಾಣದಲ್ಲಿ ಗರೀಬ್ ರಥ ಎಕ್ಸ್ಪ್ರೆಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಅವಘಡದಿಂದ ರೈಲಿನಲ್ಲಿ ಭಯಭೀತ ವಾತಾವರಣ ನಿರ್ಮಾಣವಾಯಿತು. ಆದಾಗ್ಯೂ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂಬುದು ಸಮಾಧಾನಕರ ಸಂಗತಿ. ರೈಲ್ವೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ರೈಲಿನ ಒಂದು ಬೋಗಿಯಿಂದ ಹೊಗೆ ಬರುತ್ತಿರುವುದನ್ನು ಜನರು ಗಮನಿಸಿದರು, ಇದರಿಂದಾಗಿ ರೈಲು ನಿಲ್ಲಿಸಲಾಯಿತು ಎಂದು ಸಿರ್ಹಿಂದ್ ಜಿಆರ್ಪಿ ಎಸ್ಎಚ್ಒ ರತನ್ ಲಾಲ್ ಹೇಳಿದರು.
A fire broke out in a coach of Train No. 12204 Amritsar-Saharsa at Sirhind Station in Punjab earlier today. No casualties reported. Fire has been extinguished: Ministry of Railways
— ANI (@ANI) October 18, 2025