ನೈರೋಬಿ : ಕೀನ್ಯಾದ ನೈರೋಬಿಯ ಶಾಲಾ ವಸತಿ ನಿಲಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನೈರಿ ಕೌಂಟಿಯ ಹಿಲ್ಸೈಡ್ ಆಂಡರಾಶಾ ಪ್ರೈಮರಿಯಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರ ರೆಸಿಲಾ ಒನ್ಯಾಂಗೊ ಹೇಳಿದ್ದಾರೆ. “ನಾವು ಕಾರಣವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಒನ್ಯಾಂಗೊ ಹೇಳಿದರು.
ದರ್ಶನ್ ಸಾಯಿಸಿದ್ದಾರೆ ಅನ್ನೋದು ಎಲ್ಲೂ ಪ್ರೂವ್ ಆಗಿಲ್ಲ ಅಲ್ವಾ? ದಾಸನ ಪರ ಬ್ಯಾಟ್ ಬೀಸಿದ ನಟ ಪ್ರೇಮ್
ನಾನು ಯಾವುದೇ ವಿವಿ ಸಿಂಡಿಕೇಟ್ ಸದಸ್ಯನಾಗಿ ನಾಮನಿರ್ದೇಶನ ಹೊಂದಿರುವುದಿಲ್ಲ: ರಮೇಶ್ ಬಾಬು ಸ್ಪಷ್ಟನೆ