ಮುಂಬೈ: ಮುಂಬೈನ ಮರೀನ್ ಲೈನ್ಸ್ ಪ್ರದೇಶದ ಗೋಲ್ ಮಸೀದಿ ಮೆಟ್ರೋ ಸಿನೆಮಾ ಬಳಿಯ ಕಟ್ಟಡದ ಮೇಲಿನ ಮಹಡಿಯಲ್ಲಿ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ಮಹಾರಾಷ್ಟ್ರದ ಮುಂಬೈನ ಮರೀನ್ ಲೈನ್ಸ್ ಪ್ರದೇಶದ ಗೋಲ್ ಮಸೀದಿ ಮೆಟ್ರೋ ಸಿನೆಮಾ ಎದುರಿನ ಕಟ್ಟಡದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ.
ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಬೆಂಕಿಯ ಹರಡುವಿಕೆಯನ್ನು ತಡೆಯಲಾಗಿದ್ದರೂ, ಅಗ್ನಿಶಾಮಕ ದಳದವರು ಮತ್ತೆ ಬೆಂಕಿ ಹೊತ್ತಿಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ದಳದ ತಂಡವು ಈಗ ಕಟ್ಟಡದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದೆ.