ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್‌ನಲ್ಲಿರುವ ‘ವಲೆರೊ’ (Valero) ತೈಲ ಸಂಸ್ಕರಣಾಗಾರದಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಆಕಾಶಕ್ಕೆ ಬೆಂಕಿಯ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಚಿಮ್ಮುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆಯ ವಿವರ
ಸೋಮವಾರ ಸಂಜೆ ಸುಮಾರು 6:30ರ ಸುಮಾರಿಗೆ ಸಂಸ್ಕರಣಾಗಾರದಲ್ಲಿ ಭಾರಿ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಇದರ ತೀವ್ರತೆ ಎಷ್ಟಿತ್ತೆಂದರೆ ಹತ್ತಿರದ ಮನೆಗಳು ನಡುಗಿದ ಅನುಭವವಾಗಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ನಂತರ ಇಡೀ ಘಟಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ.
ಸ್ಫೋಟಕ್ಕೆ ಕಾರಣವೇನು?
ಜೆಫರ್ಸನ್ ಕೌಂಟಿ ಶರೀಫ್ ಜೆನಾ ಸ್ಟೀಫನ್ಸ್ ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟಕದಲ್ಲಿದ್ದ “ಕೈಗಾರಿಕಾ ಹೀಟರ್” (Industrial Heater) ನಲ್ಲಾದ ತಾಂತ್ರಿಕ ದೋಷವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳ ಮತ್ತು ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿವೆ.
ಎಲ್ಲರೂ ಸುರಕ್ಷಿತ
ಈ ಭೀಕರ ಅವಘಡದಲ್ಲಿ ಯಾವುದೇ ಸಾವು-ನೋವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಸಂಸ್ಕರಣಾಗಾರದ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳಾದ ಸ್ಟೀಫನ್ಸ್ ಮತ್ತು ಟಿಮ್ ಡ್ಯುರಿಸೊ ಖಚಿತಪಡಿಸಿದ್ದಾರೆ.
BREAKING: Massive explosion at the Valero Oil Refinery in Port Arthur, Texas sends towering clouds of black smoke and intense flames shooting into the sky.
This is one of America’s largest oil refineries (335,000+ barrels/day capacity).
Emergency crews responding with no… pic.twitter.com/Vc1jLEBPg2
— Ed Krassenstein (@EdKrassen) March 24, 2026








