ಮಂಡ್ಯ :- ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ಪಲ್ಟಿ ಹೊಡೆದು 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ಜರುಗಿದೆ.
ಮಳವಳ್ಳಿಯ ಶ್ರೀ ಕ್ಷೇತ್ರ ಶಿಂಷಾ ಮಾರಮ್ಮ ದೇವಾಲಯಕ್ಕೆ ತೆರಳಿ ಪೂಜೆ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುವಾಗ ಮದ್ದೂರು ತಾಲೂಕಿನ ತೈಲೂರು ಕೆರೆ ಸಮೀಪ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ತೇರಳುವಾಗ ರಸ್ತೆ ಬದಿ ಇದ್ದ ಸಿಮೆಂಟ್ ಬ್ಲಾಕ್ ಗೆ ಡಿಕ್ಕಿ ಹೊಡೆದು ಬಸ್ ನ ಹಿಂಬದಿ ಆಕ್ಸಲ್ ಕಟ್ಟಾಗಿ ಪಲ್ಟಿ ಹೊಡೆದಿದೆ.
ಬಸ್ ನಲ್ಲಿದ್ದ 30 ಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತಕ್ಷಣವೇ ಹೆದ್ದಾರಿ ವಾಹನ ಸವಾರರು, ಸ್ಥಳೀಯರು ಹಾಗೂ ಮದ್ದೂರು ಸಂಚಾರ ಪೊಲೀಸರು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಹೊರ ತೆಗೆದು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
*ವರದಿ : ಗಿರೀಶ್ ರಾಜ್ ಮಂಡ್ಯ*








