ಬೆಂಗಳೂರು : ಬೆಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪತ್ನಿಯನ್ನು ಹೆದರಿಸಲು ನೇಣು ಬಿಗಿದುಕೊಳ್ಳಲು ಹೋಗಿ ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಂದಕುಮಾರ್ ಎಂಬಾತ ಪತ್ನಿ ಪವಿತ್ರಾರನ್ನು ಹೆದರಿಸಲು ಹೋಗಿ ನೇಣು ಹಾಕಿಕೊಂಡಿದ್ದು, ಬಳಿಕ ನಂದಕುಮಾರ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ.
ಸಂಕ್ರಾಂತಿ ಹಬ್ಬದ ದಿನವೇ ಕುಡಿದು ಬಂದಿದ್ದೀರಾ ಅಂತ ಹೆಂಡತಿ ಪವಿತ್ರಾ ಗಂಡನೊಂದಿಗೆ ಜಗಳ ಮಾಡಿದ್ದು, ಹೆಂಡತಿಗೆ ಹೆದರಿಸುವ ಸಲುವಾಗಿ ನೇಣು ಬಿಗಿದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.