ಬೆಂಗಳೂರು : ಬೆಂಗಳೂರಿನಲ್ಲಿ ಸಾಕು ನಾಯಿ ಸತ್ತಿದ್ದಕ್ಕೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಹೆಗ್ಡಡದೇವಪುರದಲ್ಲಿ ಸಾಕು ನಾಯಿ ಸತ್ತಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ನಾಯಿಯ ಚೈನ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಜಶೇಖರ್ ಎಂದು ಹೇಳಲಾಗಿದೆ. 9 ವರ್ಷದ ಹಿಂದೆ ಜಮರ್ನ್ ಶೆಫರ್ಡ್ ನಾಯಿ ತಂದಿದ್ದರು. ನಾಯಿಗೆ ಪ್ರೀತಿಯಿಂದ ಬೌನ್ಸಿ ಎಂದು ಹೆಸರಿಟ್ಟಿದ್ದರು. ಅನಾರೋಗ್ಯದಿಂದ ನಾಯಿ ಸಾವನ್ನಪ್ಪಿದ್ದು, ಬೆಳ್ಳಗ್ಗೆ ಎದ್ದು ನೋಡಿದಾಗ ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.