ಕೊಚ್ಚಿ: ಖ್ಯಾತ ಮಲಯಾಳಂ ನಟ ಕಲಾಭವನ್ (51) ನವಾಸ್ ಇಲ್ಲಿನ ಚೊಟ್ಟನಿಕ್ಕರದಲ್ಲಿರುವ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅವರಿಗೆ ಹೃದಯಾಘಾತವಾಗಿದೆ.
ಖ್ಯಾತ ಮಿಮಿಕ್ರಿ ಕಲಾವಿದ, ಗಾಯಕ ಮತ್ತು ನಟ ನವಾಸ್ ಶೂಟಿಂಗ್ ನಂತರ ತಮ್ಮ ಕೋಣೆಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಚೆಕ್ ಔಟ್ ಮಾಡಲು ಸಮಯ ಕಳೆದರೂ ಅವರು ಹೊರಗೆ ಬಾರದಿದ್ದಾಗ, ರೂಮ್ ಬಾಯ್ ಪರಿಶೀಲಿಸಲು ಹೋದಾಗ ಅವರು ಮೃತಪಟ್ಟಿರುವುದು ಕಂಡುಬಂದಿದೆ. ‘ಪ್ರಕಂಬನಂ’ ಚಿತ್ರದ ಚಿತ್ರೀಕರಣಕ್ಕಾಗಿ ಹೋಟೆಲ್ ಕೋಣೆಯನ್ನು ಕಾಯ್ದಿರಿಸಲಾಗಿತ್ತು.