ಬೆಂಗಳೂರು: ಜೈನ ಧರ್ಮದ ಪವಿತ್ರ ಹಬ್ಬವಾದ ಮಹಾವೀರ ಜಯಂತಿಯ ಪ್ರಯುಕ್ತ ನಾಳೆ ಅಂದರೆ ಮಾರ್ಚ್ 30, ಸೋಮವಾರದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (BBMP) ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಪಾಲನಾ ವಿಭಾಗದ ಉಪ ನಿರ್ದೇಶಕರು ಈ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮಾಡುವುದನ್ನು ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಜೈನ ತೀರ್ಥಂಕರರಾದ ಮಹಾವೀರರ ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಈ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಸಾರ್ವಜನಿಕರು ಹಾಗೂ ಮಾಂಸ ಮಾರಾಟಗಾರರು ಸರ್ಕಾರದ ಈ ಆದೇಶಕ್ಕೆ ಸಹಕರಿಸಬೇಕೆಂದು ಕೋರಲಾಗಿದೆ.
🚫Ban on Animal Slaughter and Sale of Meat on the Occasion of Mahavir Jayanti
Within the jurisdiction of the Greater Bengaluru Authority, animal slaughter in slaughterhouses and the sale of meat in shops across the city will remain completely prohibited on Monday, March 30, in… pic.twitter.com/AuAZUlFyr6
— Greater Bengaluru Authority (@GBA_office) March 28, 2026








