ನವದೆಹಲಿ : ಚುನಾವಣಾ ಆಯೋಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನಾಂಕವನ್ನ ಘೋಷಣೆ ಮಾಡಿದ್ದು, ನವೆಂಬರ್ 20ಕ್ಕೆ ಮತದಾನ ನಡೆಯಲಿದೆ. ಇನ್ನು ನವೆಂಬರ್ 23ಕ್ಕೆ ಫಲಿತಾಂಶ ಘೋಷಣೆ ಮಾಡಲಾಗುತ್ತೆ.
ಇನ್ನು ಜಾರ್ಖಂಡ್ನಲ್ಲಿ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಚುನಾವಣಾ ಆಯೋಗ (ಇಸಿಐ) ಪ್ರಕಟಿಸುತ್ತಿದೆ. ದೀಪಾವಳಿ, ಛತ್ ಮತ್ತು ದೇವ್ ದೀಪಾವಳಿ ಸೇರಿದಂತೆ ಹಲವಾರು ಮುಂಬರುವ ಹಬ್ಬಗಳನ್ನ ಗಮನದಲ್ಲಿಟ್ಟುಕೊಂಡು 2024ರ ನವೆಂಬರ್ ಎರಡನೇ ವಾರದಲ್ಲಿ ಚುನಾವಣೆಗಳನ್ನು ನಿಗದಿಪಡಿಸಲಾಗಿದೆ.
ಅದ್ರಂತೆ, ಮಹಾರಾಷ್ಟ್ರದಲ್ಲಿ ನವೆಂಬರ್ 20ಕ್ಕೆ ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಫಲಿತಾಂಶ ಘೋಷಣೆ ಮಾಡಲಾಗುತ್ತೆ. ಇನ್ನು ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಳ್ಳಲಿದ್ದು, ಜಾರ್ಖಂಡ್ ವಿಧಾನಸಭೆಯ ಅವಧಿ 2025ರ ಜನವರಿ 5ರಂದು ಕೊನೆಗೊಳ್ಳಲಿದೆ.
ಮಹಾರಾಷ್ಟ್ರದಲ್ಲಿ 288 ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜಾರ್ಖಂಡ್ನಲ್ಲಿ 81 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜಾರ್ಖಂಡ್’ನಲ್ಲಿ ಒಟ್ಟು 2.6 ಕೋಟಿ ಮತದಾರರಿದ್ದು, 3.67 ಲಕ್ಷ ಪಿಡಬ್ಲ್ಯೂಡಿಗಳು, 1706 ಶತಾಯುಷಿಗಳು, 448 ತೃತೀಯ ಲಿಂಗಿಗಳು, 1.14 ಲಕ್ಷ 85+ ವಯಸ್ಸಿನ ಮತದಾರರು ಸೇರಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ 9.63 ಕೋಟಿ ಮತದಾರರಿದ್ದು, 4.96 ಕೋಟಿ ಪುರುಷ ಮತದಾರರು, 4.66 ಕೋಟಿ ಮಹಿಳೆಯರು, 1.85 ಕೋಟಿ ಯುವ ಮತದಾರರು, ಸುಮಾರು 21 ಲಕ್ಷ ಮೊದಲ ಬಾರಿಗೆ ಮತದಾರರು ಸೇರಿದ್ದಾರೆ.
ಅಮೆರಿಕದಿಂದ ’31 ಪ್ರಿಡೇಟರ್ ಡ್ರೋನ್’ಗಳ ‘ಮೆಗಾ ಖರೀದಿ ಒಪ್ಪಂದ’ಕ್ಕೆ ‘ಭಾರತ’ ಸಹಿ
Good News : ‘SBI’ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ; ಇನ್ಮುಂದೆ ಕೇವಲ 15 ನಿಮಿಷದಲ್ಲೇ ‘ಸಾಲ’ ಲಭ್ಯ
ಅಮೆರಿಕದಿಂದ ’31 ಪ್ರಿಡೇಟರ್ ಡ್ರೋನ್’ಗಳ ‘ಮೆಗಾ ಖರೀದಿ ಒಪ್ಪಂದ’ಕ್ಕೆ ‘ಭಾರತ’ ಸಹಿ