ಮೈಸೂರು : ಶಿಥಿಲಗೊಂಡ ಕಾರಣ ದುರಸ್ತಿ ಮಾಡುತ್ತಿದ್ದ ಮೈಸೂರಿನ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತಗೊಂಡು ಅವಶೇಷಗಳಡಿ ಸಿಲುಕಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತವಾಗಿದ್ದು, ಕಾರ್ಯಾಚರಣೆ ಮುಂದುವರೆದಂತೆ ಮುಂಜಾನೆ ಅವಶೇಷಗಳಡಿ ಸದ್ದಾಂ ಮೃತದೇಹ ಪತ್ತೆಯಾಗಿದೆ. 80 ವರ್ಷಗಳ ಹಳೆಯ ಕಟ್ಟಡ ಇದ್ದಾಗಿದ್ದು, ದುರಸ್ಥಿ ಕಾರ್ಯ ಕಳೆದ ತಿಂಗಳು ಆರಂಭವಾಗಿತ್ತು. ನಿನ್ನೆ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿದಿದ್ದು, ಕಾರ್ಮಿಕ ಅದರ ಅಡಿ ಸಿಲುಕಿಕೊಂಡಿದ್ದಾರೆ.
ಗೌಸಿಯನಗರದ ಸದ್ದಾಂ ಎಂಬವರೇ ಕಟ್ಟಡದ ಅಡಿ ಸಿಲುಕಿದ್ದ ಕಾರ್ಮಿಕ. ಕಿಟಕಿಗಳನ್ನು ತೆಗೆದುಹಾಕುವ ವೇಳೆ ಈ ಅವಘಡ ಸಂಭವಿಸಿತ್ತು. ಇದೀಗ ಸದ್ದಾಂ ಮೃತಪಟ್ಟಿದ್ದು, ಅವಶೇಷಗಳಡಿ ಸದ್ದಾಂ ಮೃತದೇಹ ಪತ್ತೆಯಾಗಿದೆ.ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.