ನವದೆಹಲಿ : ಛತ್ತೀಸ್‌ಗಢದಲ್ಲಿ 17 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ದಾಳಿಗೊಳಗಾದ ಸ್ಥಳಗಳಲ್ಲಿ ಮಾಜಿ ಸಿಎಂ ಭೂಪೇಶ್ ಬಾಘೇಲ್ ಅವರ ನಿವಾಸವೂ ಒಂದು. ತನಿಖೆ ನಡೆಸಲು ಸಿಬಿಐ ತಂಡ ರಾಯ್‌ಪುರ ಮತ್ತು ಭಿಲೈ ತಲುಪಿದೆ.
ಸಿಬಿಐಗೂ ಮುನ್ನ ಇಡಿ ತಂಡ ಭೂಪೇಶ್ ಬಾಘೇಲ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಇಲ್ಲಿಯವರೆಗೆ ಬಂದಿರುವ ಮೂಲಗಳ ಪ್ರಕಾರ, ಸಿಬಿಐ ತಂಡಗಳು ಮಾಜಿ ಸಿಎಂ ಅವರ ರಾಯ್‌ಪುರ ಮತ್ತು ಭಿಲೈ ನಿವಾಸದ ಮೇಲೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಮಾಜಿ ಸಿಎಂ ಅವರಿಗೆ ಆಪ್ತರಾಗಿದ್ದ ಉದ್ಯಮಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿವೆ. ಮಹಾದೇವ್ ಆ್ಯಪ್ ಪ್ರಕರಣದಲ್ಲಿ ಈ ದಾಳಿ ನಡೆಸಲಾಗಿದೆ.
ಪೊಲೀಸ್ ಅಧಿಕಾರಿಗಳ ಮನೆ ಮೇಲೆ ದಾಳಿ
ಮಹಾದೇವ್ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದಂತೆ ನಡೆಸಿದ ದಾಳಿಯ ಸಂದರ್ಭದಲ್ಲಿ, ಸಿಬಿಐ ಕೆಲವು ಪೊಲೀಸ್ ಅಧಿಕಾರಿಗಳ ನಿವಾಸಗಳ ಮೇಲೂ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿರುವ ಪೊಲೀಸ್ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಲು ಸಿಬಿಐ ತಂಡ ಆಗಮಿಸಿತ್ತು.
ಕೆಲವು ದಿನಗಳ ಹಿಂದೆ, ಮಾರ್ಚ್ 10 ರಂದು, ಛತ್ತೀಸ್‌ಗಢದಲ್ಲಿ ನಡೆದ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರ ಪುತ್ರ ಮತ್ತು ಇತರರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತು. ಮಾಹಿತಿಯ ಪ್ರಕಾರ, ಭಿಲಾಯಿಯಲ್ಲಿರುವ ಚೈತನ್ಯ ಬಾಘೇಲ್ ಮತ್ತು ರಾಜ್ಯದ ಇತರ ಕೆಲವು ವ್ಯಕ್ತಿಗಳ ಆವರಣವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಶೋಧಿಸಲಾಗಿದೆ.