Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

17/03/2026 9:41 AM

BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !

17/03/2026 9:36 AM

ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ನೌಕಾಪಡೆ ಹದ್ದಿನ ಕಣ್ಣು: ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಯುದ್ಧನೌಕೆಗಳ ನಿಯೋಜನೆ

17/03/2026 9:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !
KARNATAKA

BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !

By kannadanewsnow5717/03/2026 9:36 AM

ಮೈಸೂರು: ಭ್ರಷ್ಟಾಚಾರದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು (PDO), ಅಧಿಕಾರಿಗಳ ಮುಂದೆಯೇ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆತಂಕಕಾರಿ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಘಟನೆಯ ವಿವರ:
ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯ ಪಿಡಿಒ ಮಂಜುಳಾ ಅವರು ಲೋಕಾಯುಕ್ತ ಬಲೆಗೆ ಬಿದ್ದವರು. ನೀರುಗಂಟಿ ಮಹದೇವ್ ಎಂಬುವವರಿಂದ 25,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ.

ದೂರುದಾರ ಮಹದೇವ್ ಅವರ ತಂದೆ ಸ್ವಾಮಿ ಅವರು ಕೆಲಸದಲ್ಲಿದ್ದಾಗಲೇ ನಿಧನರಾಗಿದ್ದರು. ಅನುಕಂಪದ ಆಧಾರದ ಮೇಲೆ ಮಹದೇವ್‌ಗೆ ಅದೇ ಪಂಚಾಯಿತಿಯಲ್ಲಿ ಕೆಲಸ ಸಿಕ್ಕಿತ್ತು. ಆದರೆ, ಮೃತ ತಂದೆಗೆ ಬರಬೇಕಿದ್ದ ಸುಮಾರು 2 ಲಕ್ಷ ರೂಪಾಯಿ ಬಾಕಿ ಸಂಬಳವನ್ನು ಬಿಡುಗಡೆ ಮಾಡಲು ಪಿಡಿಒ ಮಂಜುಳಾ ಅವರು 50,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹದೇವ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಕಚೇರಿಯಲ್ಲಿ ನಡೆದ ಹೈಡ್ರಾಮಾ:

ಯೋಜನೆಯಂತೆ ಮಹದೇವ್ ಅವರು ಮುಂಗಡವಾಗಿ 25,000 ರೂಪಾಯಿ ಹಣವನ್ನು ನೀಡುತ್ತಿದ್ದಾಗ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ವಶಕ್ಕೆ ಪಡೆದರು. ಈ ವೇಳೆ ತೀವ್ರ ಗಾಬರಿಗೊಂಡ ಅಧಿಕಾರಿ, ಲೋಕಾಯುಕ್ತರ ಮುಂದೆಯೇ ಕಚೇರಿಯಲ್ಲಿದ್ದ ಹರಿತವಾದ ವಸ್ತುವಿನಿಂದ ತನ್ನ ಕೈಯನ್ನು ತಾನೇ ಕುಯ್ದುಕೊಂಡು ರಾದ್ಧಾಂತ ಮಾಡಿದ್ದಾರೆ.

ತಕ್ಷಣದ ಕ್ರಮ: ರಕ್ತದ ಮಡುವಿನಲ್ಲಿದ್ದ ಮಂಜುಳಾ ಅವರನ್ನು ಲೋಕಾಯುಕ್ತ ಪೊಲೀಸರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

BREAKING : Lokayukta caught red-handed while accepting bribe `PDO' : Hydrama!
Share. Facebook Twitter LinkedIn WhatsApp Email

Related Posts

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

17/03/2026 9:41 AM2 Mins Read

ನಿಮ್ಮ ಹೆಂಡತಿ ಪ್ರತಿದಿನ ಈ ಮಂತ್ರವನ್ನು ಪಠಿಸಿದರೆ, ನಿಮ್ಮ ಪತಿ ಕೋಟ್ಯಾಧಿಪತಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

17/03/2026 9:26 AM2 Mins Read

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 9:08 AM1 Min Read
Recent News

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

17/03/2026 9:41 AM

BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !

17/03/2026 9:36 AM

ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ನೌಕಾಪಡೆ ಹದ್ದಿನ ಕಣ್ಣು: ವಾಣಿಜ್ಯ ಹಡಗುಗಳ ಸುರಕ್ಷತೆಗಾಗಿ ಯುದ್ಧನೌಕೆಗಳ ನಿಯೋಜನೆ

17/03/2026 9:27 AM

ನಿಮ್ಮ ಹೆಂಡತಿ ಪ್ರತಿದಿನ ಈ ಮಂತ್ರವನ್ನು ಪಠಿಸಿದರೆ, ನಿಮ್ಮ ಪತಿ ಕೋಟ್ಯಾಧಿಪತಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

17/03/2026 9:26 AM
State News
KARNATAKA

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

By kannadanewsnow5717/03/2026 9:41 AM KARNATAKA 2 Mins Read

ಬೆಂಗಳೂರು: ನಿಮ್ಮ ಮಗಳ ಉನ್ನತ ಶಿಕ್ಷಣ ಅಥವಾ ಮದುವೆಯ ಕುರಿತು ಚಿಂತಿತರಾಗಿದ್ದೀರಾ? ಕೇಂದ್ರ ಸರ್ಕಾರದ ‘ಸುಕನ್ಯಾ ಸಮೃದ್ಧಿ ಯೋಜನೆ’ (Sukanya…

BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !

17/03/2026 9:36 AM

ನಿಮ್ಮ ಹೆಂಡತಿ ಪ್ರತಿದಿನ ಈ ಮಂತ್ರವನ್ನು ಪಠಿಸಿದರೆ, ನಿಮ್ಮ ಪತಿ ಕೋಟ್ಯಾಧಿಪತಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

17/03/2026 9:26 AM

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 9:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.