ನವದೆಹಲಿ: ಅದಾನಿ ವಂಚನೆ ಪ್ರಕರಣ ಸಂಬಂಧ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳ ನಾಯಕರಿಂದ ಗದ್ದಲ ಕೋಲಾಹಲವನ್ನೇ ಉಂಟು ಮಾಡಲಾಯಿತು. ಈ ಹಿನ್ನಲೆಯಲ್ಲಿ ಲೋಕಸಭೆ ಕಲಾಪವನ್ನು ಡಿಸೆಂಬರ್ 2 ರ 11 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
Winter session of Parliament | Lok Sabha adjourned to meet again on 2nd December, 2024 at 1100 hours
— ANI (@ANI) November 29, 2024
ಅದಾನಿ ವಿಷಯದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳ ಬೇಡಿಕೆಯ ಮಧ್ಯೆ ಸದನದಲ್ಲಿ ಗದ್ದಲದ ಕಾರಣ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಡಿಸೆಂಬರ್ 2 ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ.
ಅದಾನಿ ಸಮೂಹದ ವಿರುದ್ಧದ ಆರೋಪಗಳು ಮತ್ತು ಮಣಿಪುರ ಮತ್ತು ಸಂಭಾಲ್ನಲ್ಲಿ ನಡೆದ ಹಿಂಸಾಚಾರದ ಕುರಿತು ಚರ್ಚೆಗೆ ಮುಂದೂಡಿಕೆ ನೋಟಿಸ್ಗಳನ್ನು ತಿರಸ್ಕರಿಸಿದ್ದನ್ನು ವಿರೋಧ ಪಕ್ಷದ ಸಂಸದರು ಪ್ರತಿಭಟಿಸಿದ್ದರಿಂದ ರಾಜ್ಯಸಭೆಯ ಕಲಾಪಗಳನ್ನು ಮುಂದೂಡಲಾಯಿತು.ಸದನ ಸೋಮವಾರ ಮತ್ತೆ ಸಭೆ ಸೇರಲಿದೆ.