ನವದೆಹಲಿ : ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಆರು ದಿನಗಳ ಇಡಿ ಕಸ್ಟಡಿಗೆ ಕಳುಹಿಸಿದೆ. ಈ ಮೂಲಕ ಅವರು ಮಾರ್ಚ್ 28ರವರೆಗೆ ಇಡಿ ಕಸ್ಟಡಿಯಲ್ಲಿ ಇರಲಿದ್ದಾರೆ. ವಿಶೇಷ ಸಿಬಿಐ ನ್ಯಾಯಾಧೀಶ ಕಾವೇರಿ ಬವೇಜಾ ಈ ಆದೇಶ ನೀಡಿದ್ದಾರೆ.
#WATCH | Delhi CM Arvind Kejriwal in Rouse Avenue court after his ED remand hearing.
Chief Minister Arvind Kejriwal sent to ED custody till March 28 by court. pic.twitter.com/jCZ0stEbfv
— ANI (@ANI) March 22, 2024
ವಿಚಾರಣೆಯ ಸಮಯದಲ್ಲಿ, ಅರವಿಂದ್ ಕೇಜ್ರಿವಾಲ್ ತಮ್ಮ ಸಚಿವರು, ಎಎಪಿ ನಾಯಕರೊಂದಿಗೆ ಸೇರಿಕೊಂಡು ದೆಹಲಿ ಮದ್ಯ ಹಗರಣದ ಕಿಂಗ್ಪಿನ್ ಮತ್ತು ಪ್ರಮುಖ ಸಂಚುಕೋರರಾಗಿದ್ದಾರೆ ಎಂದು ಇಡಿ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ತಿಳಿಸಿದೆ.
ಮದ್ಯ ಹಗರಣ ಪ್ರಕರಣದಲ್ಲಿ ಉತ್ಪತ್ತಿಯಾದ ಅಪರಾಧಗಳ ಆದಾಯದ ಪ್ರಮುಖ ಫಲಾನುಭವಿಯಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ) ಮನಿ ಲಾಂಡರಿಂಗ್ಗೆ ಅನುಕೂಲವಾಗುವಂತೆ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿದ್ದ ಲಾಭವನ್ನ ಪಡೆದುಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ವಾದಿಸಿದೆ.
‘ಮೆಟಲ್ ಡಿಟೆಕ್ಟರ್, 60 ಕ್ಯಾಮೆರಾ’ಗಳ ನಡುವೆ ‘ಭೋಜಶಾಲಾ ಆವರಣ’ದಲ್ಲಿ ಸಮೀಕ್ಷೆ ಆರಂಭಿಸಿದ ‘ASI’
ಪಶ್ಚಿಮ ದಂಡೆಯ ವಿಶಾಲ ಪ್ರದೇಶ ವಶಪಡಿಸಿಕೊಳ್ಳುವುದಾಗಿ ‘ಇಸ್ರೇಲ್’ ಘೋಷಣೆ : ಅಂತಾರಾಷ್ಟ್ರೀಯ ವಿವಾದಕ್ಕೆ ನಾಂದಿ
‘ಮೆಟಲ್ ಡಿಟೆಕ್ಟರ್, 60 ಕ್ಯಾಮೆರಾ’ಗಳ ನಡುವೆ ‘ಭೋಜಶಾಲಾ ಆವರಣ’ದಲ್ಲಿ ಸಮೀಕ್ಷೆ ಆರಂಭಿಸಿದ ‘ASI’