ಬೆಂಗಳೂರು : ರಾಜ್ಯಾದ್ಯಂತ ಮದ್ಯ ಹಾಗೂ ಬಿಯರ್ ಮಾರಾಟ ಕುಸಿತವಾಗಿದ್ದು, ಅಬಕಾರಿ ಇಲಾಖೆ ಎಂಆರ್ ಪಿ ದರ ಮಾರಾಟದ ಬಗ್ಗೆ ನಿಗಾ ಇಟ್ಟಿದೆ.
ಹೌದು, ರಾಜ್ಯದಲ್ಲಿ ಮದ್ಯ ಹಾಗೂ ಬಿಯರ್ ಮಾರಾಟ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಳಿಗೆಗಳಲ್ಲಿ ಅಬಕಾರಿ ಇಲಾಖೆಯು `MRP’ ದರ ಕಡ್ಡಾಯ ಸ್ಟಿಕ್ಕರ್ ಅಂಟಿಸುತ್ತಿದೆ.
ಸಿಎಲ್-2 ಅಡಿಯ ವೈನ್ ಶಾಪ್ ಗಳು, MSIL ಸಂಸ್ಥೆಯ ಸಿಎಲ್ -11 ಅಡಿಯ ಮಳಿಗೆಗಳಲ್ಲಿ ಅಬಕಾರಿ ಇಲಾಖೆ ಎಂಆರ್ ಪಿ ದರ ಸ್ಟಿಕ್ಕರ್ ಅಂಟಿಸಲಾಗುತ್ತಿದ್ದು, ಎಂಆರ್ ಪಿಗಿಂತ ಹೆಚ್ಚಿನ ದರ ವಸೂಲಿ ಮಾಡಿದ್ರೆ ದೂರು ನೀಡಲು ಸಲಹೆ ನೀಡಿದೆ. MSIL ಹಾಗೂ ವೈನ್ ಶಾಪ್ ಗಲ ಮೇಲೆ ಅಬಕಾರಿ ಇಲಾಖೆ ನಿಗಾ ಇಟ್ಟಿದೆ.
ರಾಯಚೂರಿನಲ್ಲಿ ಮದ್ಯದ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ ನಡೆಸಿದ್ದು, ಕೆಲ ವೈನ್ ಶಾಪ್ ಗಳಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಪತ್ತೆಯಾಗಿದ್ದು, ಗ್ರಾಹಕರಿಂದ 50-60 ರೂ. ಹೆಚ್ಚು ವಸೂಲಿ ಮಾಡಲಾಗಿದೆ. ಹೀಗಾಗಿ ಮಳಿಗೆಗಳ ನಿಯಮ ಉಲ್ಲಂಘನೆಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.