ಶ್ರೀನಗರ : ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಮೋಸ್ಟ್ ವಾಂಟೇಟ್ LET ಉಗ್ರ ಅಬ್ದುಲ್ ಮಲೀಕ್ ಹಾಗೂ ಎಲ್ ಇಟಿ ಕಮಾಂಡರ್ ಮುದಾಸೀರ್ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಬರೋಬ್ಬರಿ 100 ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದು, ಈ ಪೈಕಿ ಮೋಸ್ಟ್ ವಾಂಟೇಟ್ LET ಉಗ್ರ ಅಬ್ದುಲ್ ಮಲೀಕ್, ಉಗ್ರ ಬದ್ರುದ್ದೀನ್ ಹಾಗೂ ಎಲ್ ಇಟಿ ಕಮಾಂಡರ್ ಮುದಾಸೀರ್ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ಫೆಬ್ರವರಿ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಯೋತ್ಪಾದಕರ ಹೇಡಿತನದ ಕೃತ್ಯಕ್ಕೆ ಇಡೀ ದೇಶವೇ ಕೋಪಗೊಂಡಿತ್ತು. ಭಾರತ ತಡರಾತ್ರಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ 9 ಸ್ಥಳಗಳ ಮೇಲೆ ದಾಳಿ ಮಾಡಿತು.
ಈ ದಾಳಿ ರಾತ್ರಿ 2 ಗಂಟೆಗೆ, ದೇಶವಾಸಿಗಳು ನಿದ್ರಿಸುತ್ತಿದ್ದಾಗ ಸಂಭವಿಸಿದೆ. ಭಾರತೀಯರು ಬೆಳಿಗ್ಗೆ ಎದ್ದ ತಕ್ಷಣ ಒಳ್ಳೆಯ ಸುದ್ದಿ ಪಡೆದರು. ಕೇಂದ್ರ ಸರ್ಕಾರ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂದು ಹೆಸರಿಸಿದೆ. ವಾಯುದಾಳಿಯ ನಂತರ, ಪಾಕಿಸ್ತಾನದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಅಲ್ಲಿನ ಕಳಪೆ ಪರಿಸ್ಥಿತಿಗಳು ಸ್ಪಷ್ಟವಾಗಿ ಕಂಡುಬರುತ್ತವೆ.