ಹಾಸನ : ಇತ್ತೀಚಿಗೆ ಹಾಸನ ಜಿಲ್ಲೆಯ ಶಿರಾಡಿ ಘಾಟ್ ನಲ್ಲಿ ನಿರಂತರ ಭೂಕುಸಿತವಾಗುತ್ತಿದ್ದು, ಇಂದೂ ಮತ್ತೆ ಭೂಕುಸಿತ ವಾಗಿದ್ದು, ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಕ್ಲೋಸ್ ಮಾಡಲಾಗಿದೆ.
ಸಕಲೇಶಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ ದೊಡ್ಡತಪ್ಪಲೆ ಬಳಿ ಇಂದು ಭೂಕುಸಿತ ಸಂಭವಿಸಿದ್ದು ಸಂಚಾರ ಸ್ಥಗಿತವಾಗಿದೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನಲ್ಲಿ ಮತ್ತೆ ಸಂಚಾರ ನಿಷೇಧಗೊಂಡಿದೆ.ಶಿರಾಡಿ ಘಾಟ್ನಲ್ಲಿ ಕುಸಿತ ಉಂಟಾಗಿದ್ದರಿಂದ ವಾಹನ ಸವಾರರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.