ಹಾಸನ : ಲಾರಿ ಡಿಕ್ಕಿಯಾಗಿ ಕೆಎಸ್ ಆರ್ ಟಿಸಿ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯಾ ಬಳಿ ನಡೆದಿದೆ.
ಪಾಳ್ಯಾ ಬಳಿ ಲಾರಿ ಡಿಕ್ಕಿಯಾಗಿ ಕೆಎಸ್ ಆರ್ ಟಿಸಿ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಶಕುನಿಗೌಡ (57) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಕುನಿಗೌಡ ಹೆದ್ದಾರಿಯಲ್ಲಿ ಬಸ್ ತಡೆದು ಚೆಕ್ಕಿಂಗ್ ಮಾಡುವಾಗಲೇ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.








