Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಲೋ ಬಿಪಿಯಿಂದ ಕಾಮಿಡಿ ಕಿಲಾಡಿಗಳು ಖ್ಯಾತಿಯ `ರಾಕೇಶ್ ಪೂಜಾರಿ’ ಸಾವು.!

12/05/2025 6:55 AM

ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಪುನರಾರಂಭ | India – EU

12/05/2025 6:54 AM

BIG NEWS : ರಾಜ್ಯಾದ್ಯಂತ ಮೇ 29 ರಿಂದ `ಶಾಲೆಗಳು’ ಪುನರಾರಂಭ : ಇಲ್ಲಿದೆ 2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’

12/05/2025 6:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದಲ್ಲಿ `KSRTC’ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುಳಿವು
Uncategorized

BREAKING : ರಾಜ್ಯದಲ್ಲಿ `KSRTC’ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುಳಿವು

By kannadanewsnow5724/08/2024 12:06 PM

ಬೆಂಗಳೂರು: ಕೆಎಸ್ ಆರ್‌ ಟಿಸಿ ಬಸ್‌ ಪ್ರಯಾಣಿಕರಿಗೆ ರಾಜ್ಯ ಸರ್ಕಾರವು ಬಿಗ್‌ ಶಾಕ್‌ ನೀಡಲು ಮುಂದಾಗಿದ್ದು, ಕೆಎಸ್‌ ಆರ್‌ ಟಿಸಿ ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುಳಿವು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆಗೆ ನಿರ್ಧರಿಸಲಾಗಿದ್ದು, ಶೀಘ್ರವೇ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿದ್ದಾರೆ.

ಕೆಎಸ್‌ ಆರ್‌ ಟಿಸಿ ಸಿಬ್ಬಂದಿ ವೇತನ, ಡೀಸೆಲ್, ಬಿಡಿ ಭಾಗಗಳ ಬೆಲೆ ಹೆಚ್ಚಳವಾಗಿವೆ. ಹೀಗಾಗಿ ಬಸ್‌ ಟಿಕೆಟ್‌ ದರ ಶೇಕಡ 15 ರಿಂದ 20 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಪ್ರಸ್ತಾವನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದು, ಶೀಘ್ರವೇ ಬಸ್‌ ಟಿಕೆಟ್‌ ದರ ಏರಿಕೆ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಸಚಿವ ರಾಮಲಿಂಗ ರೆಡ್ಡಿ ಟ್ವೀಟ್ ನಲ್ಲಿ ಏನಿದೆ?
ಸಾರಿಗೆ ಸಂಸ್ಥೆಗಳನ್ನು ದಿವಾಳಿ ಮಾಡಿ ಹೊರಟ್ಟಿದ್ದ ಬಿ.ಜೆ.ಪಿಯ ಅಂದಿನ ಮುಖ್ಯಮಂತ್ರಿಗಳಾದ ಶ್ರೀ BS Yediyurappa ಮತ್ತು ಶ್ರೀ Basavaraj Bommai ರವರ ಅವಧಿಯಲ್ಲಿನ ಕರ್ಮಕಾಂಡಗಳನ್ನು ಪಟ್ಟಿ ಮಾಡಿ ಮತ್ತೊಮೆ ಮಗದೊಮ್ಮೆ ತಿಳಿಸಿ ಹೇಳಿ ಎಂದು ಟ್ಟೀಟ್ ಮೇಲೆ ಟ್ಟೀಟ್ ಮಾಡಿ ಕೋರುತ್ತಿರುವ ಬಿ.ಜೆ.ಪಿ ಪಕ್ಷದ ರಾಜ್ಯಾಧ್ಯಕ್ಷ Vijayendra Yediyurappa ಅವರ ಗಮನಕ್ಕೆ..

* ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು ನೇಮಕಾತಿ ಆಗಿಲ್ಲ.

* ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ, ಅರ್ಧವೇತನ, ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು.

* ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಶ್ರೀ ಯಡಿಯೂರಪ್ಪ‌ ಹಾಗೂ ಶ್ರೀ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಸಂಸ್ಥೆಗಳಿಗೆ ಡಕೋಟ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲಬೇಕು‌. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆಯೇ ಮಾಡಿಲ್ಲ.

* ತೈಲದ ಪ್ರತಿ ಲೀಟರ್‌ಗೆ ಸರಾಸರಿ ರೂ 62.44 ರಷ್ಟು ಇದ್ದಾಗ 2020 ರಲ್ಲಿ ಬಸ್ ದರ 12% ಏರಿಕೆ ಮಾಡಿದ್ದು, ಶ್ರೀ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಂಬುದನ್ನು ನಾವು ನೆನಪು ಮಾಡಲಿ ಅಂತ ಬಸ್ ದರದ ವಿಷಯವನ್ನು ಟ್ವೀಟ್ ಮಾಡಿರಬೇಕು ಅನ್ನಿಸುತ್ತಿದೆ.

* ಹಾಲಿ ಕರಾರಸಾ ನಿಗಮಕ್ಕೆ ₹85.80 ಡೀಸೆಲ್ ದರವಿದೆ. ಡೀಸೆಲ್ ದರ ಏರಿಸಿದ ಕೀರ್ತಿ‌ ಕೂಡ ಬಿ.ಜೆ.ಪಿ ಅವರಿಗೆ ಸಲ್ಲಬೇಕಲ್ಲವೇ?

* 2023 ರಲ್ಲಿ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿದ ಬಿ.ಜೆ.ಪಿ ಸರ್ಕಾರ ವೇತನ ಹೆಚ್ಚಳ ಪಾವತಿಗಾಗಿ ಅಥವಾ ಬಾಕಿ ವೇತನ ಪಾವತಿಸಲು ಯಾವುದೇ ಅನುದಾನವನ್ನು ನೀಡಿಲ್ಲ. ಇಂದಿಗೂ ನೌಕರರು ಬಾಕಿ ವೇತನ ಹೆಚ್ಚಳ ಹಣಕ್ಕಾಗಿ ಕಾಯುತ್ತಿದ್ದಾರೆ.

* ಸಾರಿಗೆ ಸಂಸ್ಥೆಗಳನ್ನು ₹5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಯಡಿಯೂರಪ್ಪ, ಬೊಮ್ಮಾಯಿ ಅವರ ಬಿ.ಜೆ.ಪಿ ಸರ್ಕಾರದ ಹೆಗ್ಗಳಿಕೆ ಬಗ್ಗೆ ಎಷ್ಟು ‌ಮಾತನಾಡಿದರೂ ಕಡಿಮೆಯೇ?

* ಇಂದು ಸಾರಿಗೆ ಸಂಸ್ಥೆಗಳು ಯಾವ ಸ್ಥಿತಿಯಲ್ಲಿವೆ ಎಂದರೆ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ.

* ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆ‌ರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ಗೊತ್ತಿಲ್ಲದೇ ಟ್ವೀಟ್ ಮಾಡುವ ಇವರ ಜ್ಞಾನಕ್ಕೆ ಸರಿಸಾಟಿ ಯಾರದರೂ ಇದ್ದಾರೆಯೇ?

* ಶ್ರೀ ಬೊಮ್ಮಾಯಿರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ದಿನಾಂಕ: 15/11/2021 ರಲ್ಲಿ ಶ್ರೀ. ಎಂ.ಆರ್ ಶ್ರೀನಿವಾಸಮೂರ್ತಿ ಭಾಆಸೇ( ನಿವೃತ್ತ) ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸಮಿತಿಯನ್ನು ರಚಿಸಲಾಗಿತ್ತು. ಅನೇಕ ಶಿಫಾರಸುಗಳೊಂದಿಗೆ ಪ್ರಮುಖವಾಗಿ ಸದರಿ‌ ಸಮಿತಿಯು ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ವರದಿ ನೀಡಿತ್ತು. ಆ ವರದಿಯನ್ನು ಕೂಡ ಬಿ.ಜೆ.ಪಿ ಸರ್ಕಾರವು ಅಂಗೀಕರಿಸಿರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳದೆ ಟ್ಟೀಟ್ ಮಾಡುವ ಇವರ ಚಾಳಿಯು ಸಮಾಜಕ್ಕೆ ಹಾನಿಕಾರಕ.

ಸಂಸ್ಥೆಗಳನ್ನು ಅಧೋಗತಿ ತಳ್ಳಿದ ಮೇಲೂ ಬಿ.ಜೆ.ಪಿ ಅವರು ರಾಜಕೀಯ ಮಾಡಲು ಬಯಸುತ್ತಾರೆ ಎಂದರೆ ಎಂತಹ ವಿಕೃತ ಮನಸ್ಥಿತಿ ಇವರದ್ದಾಗಿದೆ. ಇವರ ರಾಜಕೀಯಕ್ಕೆ ಸಂಸ್ಥೆಗಳು ಮುಚ್ಚಬೇಕು ಎಂಬ ಮಹದಾಸೆ ಇರಬೇಕು ಅನ್ನಿಸುತ್ತದೆ ಖಾಸಗೀಕರಣ ಇವರ ರಕ್ತದಲ್ಲಿಯೇ ಇದೆ. ಆದರೆ ನಾವು ಸಾರಿಗೆ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಿಯೇ ಮಾಡುತ್ತೇವೆ.

ಸಾರಿಗೆ ಸಂಸ್ಥೆಗಳನ್ನು ದಿವಾಳಿ ಮಾಡಿ ಹೊರಟ್ಟಿದ್ದ ಬಿ.ಜೆ.ಪಿಯ ಅಂದಿನ ಮುಖ್ಯಮಂತ್ರಿಗಳಾದ ಶ್ರೀ @BSYBJP ಮತ್ತು ಶ್ರೀ @BSBommai ರವರ ಅವಧಿಯಲ್ಲಿನ ಕರ್ಮಕಾಂಡಗಳನ್ನು ಪಟ್ಟಿ ಮಾಡಿ ಮತ್ತೊಮೆ ಮಗದೊಮ್ಮೆ ತಿಳಿಸಿ ಹೇಳಿ ಎಂದು ಟ್ಟೀಟ್ ಮೇಲೆ ಟ್ಟೀಟ್ ಮಾಡಿ ಕೋರುತ್ತಿರುವ ಬಿ.ಜೆ.ಪಿ ಪಕ್ಷದ ರಾಜ್ಯಾಧ್ಯಕ್ಷ @BYVijayendra ಅವರ ಗಮನಕ್ಕೆ..… https://t.co/VqhEv8ChyT

— Ramalinga Reddy (@RLR_BTM) August 23, 2024

BREAKING : ರಾಜ್ಯದಲ್ಲಿ `KSRTC' ಬಸ್ ಟಿಕೆಟ್ ದರ ಏರಿಕೆ ಫಿಕ್ಸ್ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸುಳಿವು BREAKING: KSRT BUS TICKET PRICE HIKE FIXED IN STATE: TRANSPORT MINISTER Ramalinga Reddy
Share. Facebook Twitter LinkedIn WhatsApp Email

Related Posts

ಯುವಕರಿಗೆ ಉದ್ಯೋಗ ಖಾತ್ರಿಗೆ ಸರ್ಕಾರ ಕ್ರಮ: ಪ್ರಧಾನಿ ಮೋದಿ

27/04/2025 9:38 AM1 Min Read

BREAKING : ಪಾಕಿಸ್ತಾನ ಸೇನಾ ಬೆಂಗಾವಲು ವಾಹನದ ಮೇಲೆ ಬಾಂಬ್ ದಾಳಿ : 10 ಮಂದಿ ಸೈನಿಕರು ಸಾವು

26/04/2025 6:51 AM1 Min Read

ಹಿರಿಯ ತಮಿಳು ನಟಿ ಬಿಂದು ಘೋಷ್ ನಿಧನ| Bindu Ghosh Dies

21/04/2025 2:21 PM1 Min Read
Recent News

BREAKING : ಲೋ ಬಿಪಿಯಿಂದ ಕಾಮಿಡಿ ಕಿಲಾಡಿಗಳು ಖ್ಯಾತಿಯ `ರಾಕೇಶ್ ಪೂಜಾರಿ’ ಸಾವು.!

12/05/2025 6:55 AM

ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಪುನರಾರಂಭ | India – EU

12/05/2025 6:54 AM

BIG NEWS : ರಾಜ್ಯಾದ್ಯಂತ ಮೇ 29 ರಿಂದ `ಶಾಲೆಗಳು’ ಪುನರಾರಂಭ : ಇಲ್ಲಿದೆ 2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’

12/05/2025 6:51 AM

ಆಪರೇಷನ್ ಸಿಂಧೂರ್ ನಲ್ಲಿ ಪ್ರತಿಧ್ವನಿಸಿದ ಶಿವ ತಾಂಡವ್ | Watch video

12/05/2025 6:44 AM
State News
KARNATAKA

BREAKING : ಲೋ ಬಿಪಿಯಿಂದ ಕಾಮಿಡಿ ಕಿಲಾಡಿಗಳು ಖ್ಯಾತಿಯ `ರಾಕೇಶ್ ಪೂಜಾರಿ’ ಸಾವು.!

By kannadanewsnow5712/05/2025 6:55 AM KARNATAKA 1 Min Read

ಬೆಂಗಳೂರು : ಲೋ ಬಿಪಿಯಿಂದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ. ಕಾಮಿಡಿ ಕಿಲಾಡಿಗಳು 3 ನೇ ಆವೃತ್ತಿಯಲ್ಲಿ…

BIG NEWS : ರಾಜ್ಯಾದ್ಯಂತ ಮೇ 29 ರಿಂದ `ಶಾಲೆಗಳು’ ಪುನರಾರಂಭ : ಇಲ್ಲಿದೆ 2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’

12/05/2025 6:51 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಈ ನಿಯಮಗಳ ಪಾಲನೆ ಕಡ್ಡಾಯ.!

12/05/2025 6:34 AM

BIG NEWS : ರಾಜ್ಯ ಸರ್ಕಾರದಿಂದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಶೇ.5 ರಷ್ಟು ತೆರಿಗೆ ರಿಯಾಯಿತಿ ಜೂನ್ 30 ರವರೆಗೆ ಅವಧಿ ವಿಸ್ತರಣೆ.!

12/05/2025 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.