ನವದೆಹಲಿ: ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಬಿಸಿ ಬಿಸಿಯಾಗಿದೆ. ಈ ಮಧ್ಯೆ, ಈ ಪ್ರಕರಣದ ಆರೋಪಿ ಸಂಜಯ್ ರಾಯ್‌ಗೆ ಸಿಬಿಐ ಸುಳ್ಳು ಪತ್ತೆ ಪರೀಕ್ಷೆ ನಡೆಸಲಿದೆ ಎಂದು ವರದಿಯಾಗಿದೆ. ಈ ಪರೀಕ್ಷೆಯನ್ನು ಪಾಲಿಗ್ರಾಫ್ ಪರೀಕ್ಷೆ ಎಂದೂ ಕರೆಯುತ್ತಾರೆ. ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐ ನ್ಯಾಯಾಲಯದಿಂದ ಅನುಮತಿ ಕೋರಿದೆ ಮತ್ತು ಸಿಬಿಐ ಸೀಲ್ದಾ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿದೆ. ಪಾಲಿಗ್ರಾಫ್ ಪರೀಕ್ಷೆಯನ್ನ ನ್ಯಾಯಾಲಯ ಮತ್ತು ಆರೋಪಿಗಳ ಒಪ್ಪಿಗೆಯೊಂದಿಗೆ ಮಾತ್ರ ಮಾಡಲಾಗುತ್ತದೆ.
ನ್ಯಾಯಾಲಯದಿಂದ ಅನುಮತಿ.!
ಈ ಪರೀಕ್ಷೆ ನಡೆಸಲು ನ್ಯಾಯಾಲಯದಿಂದ ಅನುಮತಿ ದೊರೆತಿದೆ ಎನ್ನುವ ಮಾಹಿತಿ ಲಭಿಸಿದೆ. ಈಗ ಸಿಬಿಐ ಈ ಪರೀಕ್ಷೆಯನ್ನ ಆದಷ್ಟು ಬೇಗ ಮಾಡಬಹುದು. ಮೂಲಗಳ ಪ್ರಕಾರ ನಾಳೆಯೂ ಈ ಪರೀಕ್ಷೆ ನಡೆಯಲಿದೆ. ವಾಸ್ತವವಾಗಿ ಸಿಬಿಐ ಘಟನೆಯ ಸತ್ಯವನ್ನ ಬಹಿರಂಗಪಡಿಸಲು ಈ ಪರೀಕ್ಷೆ ನಡೆಸಲಾಗುವುದು.
BREAKING :ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ :’ರಿಟ್’ ಅರ್ಜಿ ವಿಚಾರಣೆ ಆ.29ರವರೆಗೆ ಮುಂದೂಡಿ ಹೈಕೋರ್ಟ್ ಸೂಚನೆ
ಜಮ್ಮು-ಕಾಶ್ಮೀರ ಚುನಾವಣೆಗೆ ‘ನ್ಯಾಷನಲ್ ಕಾನ್ಫರೆನ್ಸ್’ ಪ್ರಣಾಳಿಕೆ ಬಿಡುಗಡೆ, ‘PSA’ ರದ್ದು, 1 ಲಕ್ಷ ಉದ್ಯೋಗ ಭರವಸೆ
BREAKING :ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ :’ರಿಟ್’ ಅರ್ಜಿ ವಿಚಾರಣೆ ಆ.29ರವರೆಗೆ ಮುಂದೂಡಿ ಹೈಕೋರ್ಟ್ ಸೂಚನೆ