ನವದೆಹಲಿ : ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಹಿಂದೂ ದೇವಾಲಯಗಳನ್ನ ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದ್ದಾನೆ. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (SFJ) ಸಂಘಟನೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಪನ್ನುನ್ ನವೆಂಬರ್ 16 ಮತ್ತು 17 ರಂದು ದಾಳಿಯ ಬಗ್ಗೆ ಎಚ್ಚರಿಸಿದ್ದಾನೆ. ಕೆನಡಾದ ಬ್ರಾಂಪ್ಟನ್ನಲ್ಲಿ ರೆಕಾರ್ಡ್ ಮಾಡಲಾದ ಈ ವೀಡಿಯೊ ಹಿಂದೂ ಪೂಜಾ ಸ್ಥಳಗಳ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನ ಹೊಂದಿದೆ ಎಂದು ವರದಿಯಾಗಿದೆ.
“ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಅಡಿಪಾಯವನ್ನ ನಾವು ಅಲುಗಾಡಿಸುತ್ತೇವೆ” ಎಂದು ಪನ್ನುನ್ ಹೇಳಿದ್ದಾನೆ. ಅಂದ್ಹಾಗೆ, ಈ ವರ್ಷದ ಜನವರಿಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಚಿತ್ರಗಳನ್ನ ವೀಡಿಯೋ ತೋರಿಸುತ್ತದೆ. ಹಿಂದೂ ದೇವಾಲಯಗಳ ಮೇಲಿನ ಖಲಿಸ್ತಾನಿ ದಾಳಿಯಿಂದ ದೂರವಿರಲು ಪನ್ನುನ್ ಕೆನಡಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾನೆ.
Good News : ಕುರುಡರಿಗೆ ಹೊಸ ಭರವಸೆ ; ವಿಶ್ವದ ಮೊದಲ ‘ಸ್ಟೆಮ್ ಸೆಲ್ ಚಿಕಿತ್ಸೆ’ಯಿಂದ ಮತ್ತೆ ‘ದೃಷ್ಟಿ’
ಪ್ರಯಾಣಿಕರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ಅವಧಿ ವಿಸ್ತರಣೆ
BIG NEWS : ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ನಂ.1: ಸಿಎಂ ಸಿದ್ದರಾಮಯ್ಯ ವಾಗ್ದಾಳಿ