ನವದೆಹಲಿ : ಭಾರತೀಯ ಫುಟ್ಬಾಲ್ ತಂಡದ ನೂತನ ಮುಖ್ಯ ಕೋಚ್ ಆಗಿ ಖಾಲಿದ್ ಜಮಿಲ್ ಅವರನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಶುಕ್ರವಾರ ಖಾಲಿದ್ ಜಮಿಲ್ ಅವರನ್ನು ಭಾರತೀಯ ಪುರುಷರ ಫುಟ್ಬಾಲ್ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ. ಕಳೆದ ತಿಂಗಳು ನಡೆದ ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಈ ಘೋಷಣೆ ಹೊರಬಿದ್ದಿದ್ದು, ಮನೋಲೋ ಮಾರ್ಕ್ವೆಜ್ ಅವರ ಸ್ಥಾನವನ್ನು ಜಮಿಲ್ ವಹಿಸಿಕೊಳ್ಳಲಿದ್ದಾರೆ.