ಕೊಚ್ಚಿ : ಕೇರಳದ ನೀಲಂಬೂರ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ಯದನ್ ಶೌಕತ್ ಗೆಲುವು ಸಾಧಿಸಿದ್ದಾರೆ, ಸಿಪಿಎಂನ ಎಂ ಸ್ವರಾಜ್ ಅವರನ್ನು ಸೋಲಿಸಿದ್ದಾರೆ.
ನಿಲಂಬೂರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ಯದನ್ ಶೌಕತ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ಸಿಪಿಐ(ಎಂ)ನ ಎಂ ಸ್ವರಾಜ್ ಅವರನ್ನು 11,077 ಮತಗಳಿಂದ ಸೋಲಿಸಿದ್ದಾರೆ. ಈ ವರ್ಷದ ಜನವರಿಯವರೆಗೆ ನಿಲಂಬೂರ್ ಶಾಸಕರಾಗಿದ್ದ ಸ್ವತಂತ್ರ ಅಭ್ಯರ್ಥಿ ಪಿವಿ ಅನ್ವರ್ 19,946 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.