ಕೊಡಗು : ಕೊಡಗಿನಲ್ಲಿ ಕೇರಳ ಮೂಲದ ಉದ್ಯಮಿ ಪ್ರದೀಪ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉದ್ಯಮಿ ಪ್ರದೀಪ್ ಹತ್ಯೆ ಪ್ರಕರಣ ಸಂಬಂಧ ಗೋಣಿಕೊಪ್ಪಲು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರದೀಪ್ ಹತ್ಯೆ ಪ್ರಕರಣ ಸಂಬಂಧ ಅನಿಲ್ ಮುತ್ತಣ, ದೀಪಕ್, ಸ್ಟೀಫನ್, ಕಾರ್ತಿಕ್, ಹರೀಶ್ ಬಂಧಿತರು.
ಏಪ್ರಿಲ್ 23 ರಂದು ತೋಟದ ಒಂಟಿ ಮನೆಯಲ್ಲಿ ಪ್ರದೀಪ್ ಕೊಯ್ಲಿ ಹತ್ಯೆಯಾಗಿತ್ತು, ಪ್ರೇಯಸಿಯನ್ನು ವಿವಾಹವಾಗಲು ಹಣಕ್ಕಾಗಿ ಪ್ರದೀಪ್ ನನ್ನು ಅನಿಲ್ ಕೊಂದಿದ್ದ. ಶೀಘ್ರ ಆಸ್ತಿ, ಹಣ ಗಳಿಸಿ ಪ್ರೇಯಸಿ ಪೋಷಕರನ್ನು ಮೆಚ್ಚಿಸಲು ಉದ್ಯಮಿ ಪ್ರದೀಪ್ ನನ್ನು ಕತ್ತು ಬಿಗಿದು ಕೊಲೆ ಮಾಡಿದ್ದ.
ಪ್ರದೀಪ್ ಕೊಲೆ ಬಳಿಕ ಅನಿಲ್ ಮನೆಯಲ್ಲಿದ್ದ 13 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ. 10 ಲಕ್ಷ ರೂ.ಗಳನ್ನು ಪ್ರೇಯಸಿಯ ಪೋಷಕರಿಗೆ ಅನಿಲ್ ನೀಡಿದ್ದ. ತನ್ನ ಪ್ರೇಯಸಿಯ ಸಹೋದರನಿಗೆ ಐಫೋನ್ ಗಿಫ್ಟ್ ಸಹ ನೀಡಿದ್ದ. ಕೊಲೆಯಾದ ಪ್ರದೀಪ್ ಆಸ್ತಿ ಪತ್ರಗಳನ್ನೂ ಹಂತಕರು ಕದ್ದೊಯ್ದಿದ್ದರು. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಕೊಂಗಣದಲ್ಲಿ ಕೊಲೆ ನಡೆದಿತ್ತು. ಕೊಂಗಣದಲ್ಲಿ ಏಕಾಂಗಿಯಾಗಿ ಪ್ರದೀಪ್ ವಾಸಿಸುತ್ತಿದ್ದರು.