ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸರ್ಕಾರ ಇಂದು ವಿವಿಧ ಕೇಂದ್ರ ಮತ್ತು ರಾಜ್ಯ ಪಡೆಗಳ ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆಗಾಗಿ ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ. ಇವರಿಂದಿಗೆ 16 ಪೊಲೀಸರಿಗೆ ಮತ್ತು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ (ಎಚ್ಜಿ &ಸಿಡಿ) ಮತ್ತು ಸುಧಾರಣಾ ಸೇವೆಗಳ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಲಾಗಿದೆ. 79ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನವಾದ ಗುರುವಾರ ಪದಕ ವಿಜೇತರ ಹೆಸರುಗಳನ್ನು ಸರ್ಕಾರ ಪ್ರಕಟಿಸಿದೆ.
ಇದರಲ್ಲಿ 233 ಸಿಬ್ಬಂದಿಗೆ ವಿಶಿಷ್ಟ ಸೇವಾ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 758 ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಣೆಯಾಗಿದೆ.
ಪದಕ ಪಡೆದ ಅಧಿಕಾರಿಗಳು
ಡಾ. ಚಂದ್ರಗುಪ್ತ, ಐಜಿಪಿ
ಡಾ. ರಾಮಕೃಷ್ಣ ಮುದ್ದೆಪಾಲ್, ಕಮಾಂಡಂಟ್
ಕೆ.ಎಂ. ಶಾಂತರಾಜು, ಎಸ್ಪಿ
ಸಜುನ ಶೆಟ್ಟಿ, ಎಎಸ್ಐ
ಜಾನ್ಸಿ ರಾಣಿ ಜೆ., ಎಸ್ಐ
ಗುರುರಾಜ ಮಹಾದೇವಪ್ಪ ಬೂದಿಹಾಳ, ಎಎಸ್ಐ
ರಾಕೇಶ್ ಎಂ.ಜೆ., ಹೆಡ್ ಕಾನ್ಸ್ಟೆಬಲ್
ಶಂಶುದ್ದೀನ್, ಹೆಡ್ ಕಾನ್ಸ್ಟೆಬಲ್
ವೈ. ಶಂಕರ್, ಹೆಡ್ ಕಾನ್ಸ್ಟೆಬಲ್
ಅಲಂಕಾರ ರಾಕೇಶ್, ಹೆಡ್ ಕಾನ್ಸ್ಟೆಬಲ್
ರವಿ ಎಲ್. ಹೆಡ್ ಕಾನ್ಸ್ಟೆಬಲ್
ಕಲಾ ಕೃಷ್ಣಸ್ವಾಮಿ, ಎಸ್ಪಿ
ವೆಂಕಟೇಶ ನಾರಾಯಣಪ್ಪ, ಎಸ್ಪಿ
ಪ್ರವೀಣ ಬಾಬು ಗುರುಸಿದ್ಧಯ್ಯ, ಇನ್ಸ್ಪೆಕ್ಟರ್
ಪ್ರಕಾಶ್ ರಾಥೋಡ್, ಎಸಿಪಿ
ಎಡ್ವಿನ್ ಪ್ರದೀಪ್ ಸ್ಯಾಮ್ಸನ್, ಇನ್ಸ್ಪೆಕ್ಟರ್
ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ಇನ್ಸ್ಪೆಕ್ಟರ್
ಶಾಂತಾರಾಮ, ಇನ್ಸ್ಪೆಕ್ಟರ್