ಬಾಗಲಕೋಟೆ : ಖ್ಯಾತ ತಬಲಾ ಮಾಂತ್ರಿಕ ಪಂ. ರಾವಸಾಹೇಬ ಎಚ್. ಮೋರೆ (84) ಭಾನುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
1941ರ ಜೂ.10ರಂದು ಜನಿಸಿದ ರಾವಸಾಹೇಬ ಮದುವೆಯಾಗದೇ ಸಂಗೀತಕ್ಕೆ ಜೀವನ ಮುಡುಪಾಗಿಟ್ಟ. ತಂದೆ ಹುಚ್ಚಪ್ಪ ಮಾಜಿ ಪ್ರಧಾನ ಮಂತ್ರಿ ಮುರಾರ್ಜಿ ದೇಸಾಯಿ ಅವರ ಭದ್ರತಾ ಸಿಬ್ಬಂದಿಯಾಗಿದ್ದರೂ ಹಾರ್ಮೋನಿಯಂ ವಾದಕರು.ಹೀಗಾಗಿ ಸಂಗೀತಾಸಕ್ತಿ ರಕ್ತಗತವಾಗಿತ್ತು. 6ನೇ ತರಗತಿ ಶಿಕ್ಷಣ ಮೊಟಕುಗೊಳಿಸಿ ಅಮೀನಗಡ ತೋಟಪ್ಪ ಅವರಲ್ಲಿ ಹಾರ್ಮೋನಿಯಂ ಕಲಿತು, ತಬಲಾ ವಾದನದತ್ತ ಆಸಕ್ತಿ ಹೊಂದಿ ಗೋವಿಂದದಾಸ ಕಟ್ಟಿ ಅವರಿಂದ ತಬಲಾ ಕಲಿತರು. ನಂತರ ಕೆ.ಎಸ್. ಹಡಪದ ಗುರುಗಳು ಮೋರೆ ಅವರಿಗೆ ತಬಲಾದಲ್ಲಿ ಜ್ಞಾನದ ಸಂಪತ್ತು ತುಂಬಿದರು.
ನಟರಾಜ ಸಂಗೀತ ವಿದ್ಯಾಲಯದ ಜವಾಬ್ದಾರಿಯನ್ನು 1965ರಿಂದ ವಹಿಸಿಕೊಂಡು 6 ದಶಕ ಮುನ್ನಡೆಸಿ ಸಂಗೀತ ಪರಂಪರೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದರು. 2006-07ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.