ಬೆಳಗಾವಿ : ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಳಗಾವಿಯ ಮಾಲಿನಿಸಿಟಿ ಮೈದಾನದಲ್ಲಿ ಬಿಜೆಪಿ, ರೈತರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಯುತ್ತಿದೆ. ರೈತರ ಅತ್ಮಹತ್ಯೆಯಲ್ಲಿ ದೇಶದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. ಕಾಂಗ್ರೆಸ್ಸಿಗರಿಗೆ ರೈತರ ಬಗ್ಗೆ ಮಾತನಾಡಲು ಯೋಗ್ಯತೆ ಇದೆಯಾ? ಎಂದು ಕಿಡಿಕಾರಿದ್ದಾರೆ.
ಬೊಮ್ಮಾಯಿ ವಿದ್ಯಾನಿಧಿ ಜಾರಿ ಮಾಡಿದರು, ಅದಕ್ಕೂ ಹಣ ಕೊಡಲ್ಲ. ಪ್ರವಾಹ ಬರಗಾಲ ಬಂದಾಗ ಒಂದೇ ತಿಂಗಳಲ್ಲಿ ಪರಿಹಾರ ಕೊಡ್ತಿದ್ದೆವು. ಕಾಂಗ್ರೆಸ್ ಸರ್ಕಾರ 6 ತಿಂಗಳಾದ್ರೂ ಪರಿಹಾರ ಕೊಟ್ಟಿಲ್ಲ. ಯಾವ ಮುಖ ಇಟ್ಟುಕೊಂಡು ಕೇಂದ್ರದ ಬಳಿ ಪರಿಹಾರ ಕೇಳುತ್ತೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಹಣ ಬಳಕೆ ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ಒಬ್ಬ ದಲಿತ ನಾಯಕ ಕೂಡ ಮಾತನಾಡುತ್ತಿಲ್ಲ ಎಮದರು.








