ದಾವಣಗೆರೆ : ಪ್ರಶಸ್ತಿಗಳ ರಾಜ, ಬೆಳ್ಳೂಡಿ ಕಾಳಿ ಎಂದೇ ಹೆಸರುವಾಸಿಯಾದ ಟಗರು ಮೃತಪಟ್ಟಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯ ಈ ಟಗರು ಅನಾರೋಗ್ಯದಿಂದ ಸಾವನ್ನಪ್ಪಿದೆ.
ಬೆಳ್ಳೂಡಿ ಕಾಳಿ ಕರ್ನಾಟಕದ ಪ್ರಸಿದ್ದ ಕೊಣ್ಣೂರು ಕಣ, ದಾವಣಗೆರೆ ದುಗ್ಗವ್ವ ಕಣ, ಹರಿಹರ ಕಣ, ಹೊನ್ನಾಳಿ ಕಣದಲ್ಲಿ ಸತತವಾಗಿ ಎರಡು ಸಲ ಗೆದ್ದು ಬೀಗಿತ್ತು. ಕೊಣ್ಣೂರು ಕಣದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು.
ಪ್ರಸಿದ್ದ ಕಾಳಿ ಟಗರು ಮೃತಪಟ್ಟ ಹಿನ್ನೆಲೆಯಲ್ಲಿ ಟಗರಿನ ಅಭಿಮಾನಿಗಳು ಟಗರು ಅಂತಿಮ ದರ್ಶನ ಪಡೆದಿದ್ದಾರೆ.