ಬೆಂಗಳೂರು : ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಚಿಕ್ಕ ಮಕ್ಕಳು ಬಿದ್ದು ಆಗುವ ಅವಘಢಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶದಿಂದ ಕರ್ನಾಟಕ ಅಂತರ್ಜಲ (ಅಭಿವೃದ್ದಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ಕ್ಕೆ ತಿದ್ದುಪಡಿ ಸಂಬಂಧ ರಾಜ್ಯ ಸರ್ಕಾರವು ರಾಜ್ಯ ಪತ್ರ ಹೊರಡಿಸಿದೆ.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2024 ಇದಕ್ಕೆ 2025 ರ ಜನವರಿ ತಿಂಗಳ 9ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ: 10 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ (ಭಾಗ IV-A) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.
(2025 ರ ಜನವರಿ ತಿಂಗಳ 10ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪಕಟವಾಗಿದೆ). ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2024 (2025 ರ ಜನವರಿ ತಿಂಗಳ 9ನೇ ದಿನಾಂಕದಂದು ರಾಜ್ಯಪಾಲರಿಂದ ಅನುಮತಿಯನ್ನು ಪಡೆಯಲಾಗಿದೆ)
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ, 2011ನ್ನು ತಿದ್ದುಪಡಿ ಮಾಡಲು ಒಂದು ಅಧಿನಿಯಮ. ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ, 2011ರ (2011ರ ಕರ್ನಾಟಕ ಅಧಿನಿಯಮ 25) ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ; ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2024 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2. ಪ್ರಕರಣ 2ರ ತಿದ್ದುಪಡಿ.- ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ
ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ, 2011 (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ)ರ 2ನೇ ಪ್ರಕರಣದ (ಜೆ) ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(ಜೆ-ಎ) “ಅನುಷ್ಠಾನ ಏಜೆನ್ಸಿ “ಯು ಇದರ ಎಲ್ಲಾ ವ್ಯಾಕರಣ ವ್ಯತ್ಯಾಸಗಳೊಂದಿಗೆ ಹಾಗೂ ಸಜಾತಿಯ ಪದಾವಳಿಯೊಂದಿಗೆ, ಕೊರೆ ಬಾವಿಗಳು ಅಥವಾ ಕೊಳವೆ ಬಾವಿಗಳ ಕೊರೆಯುವುದು, ನಿರ್ವಹಿಸುವುದು ಹಾಗೂ ನೀರನ್ನು ನೇರವಾಗಿಯಾಗಲಿ ಅಥವಾ ಗುತ್ತಿಗೆದಾರರ ಮುಖಾಂತರವಾಗಲಿ ಸರಬರಾಜು ಮಾಡುವುದನ್ನು ಕೈಗೊಳ್ಳುವ ಸಂಬಂಧದಲ್ಲಿ ಸರ್ಕಾರಿ ಏಜೆನ್ಸಿ, ಸಾರ್ವಜನಿಕ ಅಥವಾ ಖಾಸಗಿ ಉದ್ಯಮ.”
3. ಪ್ರಕರಣ 11ರ ತಿದ್ದುಪಡಿ.- ಮೂಲ ಅಧಿನಿಯಮದ 11ನೇ ಪ್ರಕರಣದ
(5)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(5-ಎ) ಅಂತರ್ಜಲ ಪ್ರಾಧಿಕಾರ ಅಥವಾ ಜಿಲ್ಲಾ ಅಂತರ್ಜಲ ಸಮಿತಿಯಿಂದ
ಅನುಮತಿಯನ್ನು ಪಡೆದ ಮೇಲೆ, ಭೂ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ ಹದಿನೈದು ದಿನಗಳಿಗೆ ಮುಂಚಿತವಾಗಿ ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತೆ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರದ ಸ್ಥಳೀಯ ಸಂಸ್ಥೆಗೆ ಲಿಖಿತದಲ್ಲಿ ತಿಳಿಸತಕ್ಕದ್ದು.”
4. ಹೊಸ ಪ್ರಕರಣ 11ಎ ಸೇರ್ಪಡೆ.- ಮೂಲ ಅಧಿನಿಯಮದ
11ನೇ ಪ್ರಕರಣದ ತರುವಾಯ ಈ ಮುಂದಿನ ಹೊಸ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-
“11ಎ, ಅಧಿಸೂಚಿತ ಪ್ರದೇಶದ ಹೊರತಾದ ಪ್ರದೇಶದಲ್ಲಿ ಭೂ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಅಂತರ್ಜಲವನ್ನು ತೆಗೆಯುವ ಮತ್ತು ಬಳಸಲು ತೆಗೆದುಕೊಳ್ಳಬೇಕಾದ ಕ್ರಮಗಳು.- ಭೂಮಿಯ ಅಥವಾ ಆವರಣಗಳ ಮಾಲೀಕ (ರೈತನನ್ನು ಹೊರತುಪಡಿಸಿ) ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ ಹದಿನೈದು ದಿನಗಳಿಗೆ ಮುಂಚಿತವಾಗಿ ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತೆ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರದ ಸ್ಥಳೀಯ ಸಂಸ್ಥೆಗೆ ಲಿಖಿತದಲ್ಲಿ ತಿಳಿಸತಕ್ಕದ್ದು.”
5. ಪ್ರಕರಣ 12ರ ತಿದ್ದುಪಡಿ.- ಮೂಲ ಅಧಿನಿಯಮದ 12ನೇ ಪ್ರಕರಣದ
(8)ನೇ ಉಪ ಪ್ರಕರಣದಲ್ಲಿರುವ “ಯಾವುದೇ ಅನುಚಿತ ಘಟನೆಗಳು ಸಂಭವಿಸುವುದನ್ನು ತಡೆಗಟ್ಟುವುದಕ್ಕಾಗಿ ನಿಷ್ಕ್ರಿಯವಾದ” ಎಂಬ ಪದಗಳಿಗೆ ಬದಲಾಗಿ “ನಿಯಮಿಸಬಹುದಾದಂಥ ವಿಧಾನದಲ್ಲಿ ನಿಷ್ಕ್ರಿಯಗೊಂಡ ಕೊರೆ ಬಾವಿಗಳು ಅಥವಾ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
6. ಹೊಸ ಅಧ್ಯಾಯಗಳಾದ ॥ಎ ಮತ್ತು ॥ಬಿ ಸೇರ್ಪಡೆ.-
(1) ಮೂಲ ಅಧಿನಿಯಮದ 21ನೇ ಪ್ರಕರಣದ ತರುವಾಯ ಈ ಮುಂದಿನ ಹೊಸ ಅಧ್ಯಾಯಗಳನ್ನು ಸೇರಿಸತಕ್ಕದ್ದು, ಎಂದರೆ:-
“ಅಧ್ಯಾಯ |||ಎ ವಿಫಲಗೊಂಡ ಅಥವಾ ನಿಷ್ಕ್ರಿಯವಾಗಿ ಬಿಟ್ಟ ತೆರೆದ ಕೊಳವೆ ಬಾವಿಯಲ್ಲಿ ಮಕ್ಕಳು ಬೀಳುವುದನ್ನು ತಡೆಗಟ್ಟಲು ಕ್ರಮಗಳು
21ಎ. ಕೊರೆಯುವ ಏಜೆನ್ಸಿ, ಅನುಷ್ಠಾನ ಏಜೆನ್ಸಿ ಮತ್ತು ಭೂ ಮಾಲೀಕನ ಕರ್ತವ್ಯಗಳು.-
(1) ಕೊರೆ ಬಾವಿ ಅಥವಾ ಕೊಳವೆ ಬಾವಿ ಕೊರೆಸುವುದನ್ನು ಪೂರ್ಣಗೊಳಿಸಿದ ನಂತರ ತಕ್ಷಣ, ಕೊರೆಯುವ ಏಜೆನ್ಸಿ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಯುಕ್ತವಾಗಿ ಮುಚ್ಚತಕ್ಕದ್ದು.
(2) ವಿಫಲಗೊಂಡ ಅಥವಾ ಬಿಟ್ಟುಬಿಡಲಾದ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊರ ಬಾವಿ ಅಥವಾ ಕೊಳವೆ ಬಾವಿಯ ಸಂದರ್ಭದಲ್ಲಿ ಗುದ್ದುಬೀಳುವುದನ್ನು ಅಥವಾ ಕುಸಿಯುವುದನ್ನು ತಡೆಯಲು, ಅದನ್ನು ಸ್ಥಳೀಯ ಬಳಕೆಯ ಕಲ್ಲುಗಳು ಮತ್ತು ತಿಳಿ ಕೆಸರಿನಿಂದ ತುಂಬತಕ್ಕದ್ದು ಹಾಗೂ ನೆಲ ಮಟ್ಟದಿಂದ ಮೇಲೆ 2’x2′ ದಿಬ್ಬವನ್ನು ಕಟ್ಟತಕ್ಕದ್ದು. ದಿಬ್ಬಕ್ಕೆ ಮುಳ್ಳು, ತಂತಿ ಅಥವಾ ಸ್ಥಳೀಯವಾಗಿ ಸಿಗುವ ಮುಳ್ಳು ಗಿಡಗಳೊಂದಿಗೆ ಬೇಲಿಹಾಕತಕ್ಕದ್ದು. ಘನ ತ್ಯಾಜ್ಯ ಅಥವಾ ರಾಸಾಯನಿಕ ತ್ಯಾಜ್ಯ ಪದಾರ್ಥಗಳಿಂದ ಹಾಗೆ ತುಂಬತಕ್ಕದ್ದಲ್ಲ.
(3) ಭೂಮಿಯ ಅಥವಾ ಆವರಣಗಳ ಮಾಲೀಕ ಮತ್ತು ಅನುಷ್ಠಾನ ಏಜೆನ್ಸಿಯು 24 ಗಂಟೆಗಳೊಳಗಾಗಿ ವಿಫಲಗೊಂಡ ಅಥವಾ ಬಿಟ್ಟುಬಿಡಲಾದ ಅಥವಾ ಅಪೂರ್ಣವಾಗಿ ಕೊರಸಲಾದ ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು (2) ನೇ ಉಪ-ಪ್ರಕರಣದಲ್ಲಿ ಹೇಳಲಾದಂತೆ ಸುರಕ್ಷಿತವಾಗಿ ಮುಚ್ಚತಕ್ಕದ್ದು ಹಾಗೂ ಈ ಕುರಿತು ಕೈಗೊಂಡ ಕ್ರಮವನ್ನು ಮುಚ್ಚಲಾದ ಕೊರೆ ಬಾವಿ ಅಥವಾ ಕೊಳವೆ ಬಾವಿಯ ಛಾಯಾಚಿತ್ರಗಳೊಂದಿಗೆ ತಕ್ಷಣವೇ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ತಿಳಿಸತಕ್ಕದ್ದು ಹಾಗೂ ಸಂಬಂಧಪಟ್ಟ ಪ್ರಾಧಿಕಾರವು ಪರಿಶೀಲನೆಯ ತರುವಾಯ ಕೊಳವ ಬಾವಿಯನ್ನು ಯುಕ್ತವಾಗಿ ಮುಚ್ಚಲಾಗಿದೆ ಎಂದು ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ನೀಡತಕ್ಕದ್ದು.
(4) ಕೊರೆಯುವ ಏಜೆನ್ಸಿಯು (1), (2) ಮತ್ತು (3)ನೇ ಉಪಪ್ರಕರಣಗಳಲ್ಲಿನ ಅಗತ್ಯಗಳನ್ನು ಅವರು ಪಾಲಿಸಿರುವ ಕುರಿತು ನಮೂದಿಸಲಾದ ಜಂಟಿ ಘೋಷಣೆಯನ್ನು ಗ್ರಾಮೀಣ ಪ್ರದೇಶಗಳ ಸಂದರ್ಭದಲ್ಲಿ ಹತ್ತಿರದ ಗ್ರಾಮ ಪಂಚಾಯತಿ ಅಥವಾ ಗ್ರಾಮ ಆಡಳಿತಾಧಿಕಾರಿಗೆ, ನಗರ ಸ್ಥಳೀಯ ನಿಕಾಯದ ಅಧಿಕಾರವ್ಯಾಪ್ತಿಯಲ್ಲಿನ ಸಂಬಂಧಿತ ಪೌರಾಡಳಿತ ಆಯುಕ್ತ ಅಥವಾ ಸಂದರ್ಭಾನುಸಾರವಾಗಿ, ಮುಖ್ಯಾಧಿಕಾರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್‌ಗೆ ಸಲ್ಲಿಸತಕ್ಕದ್ದು.
(5) ದುರಸ್ತಿಗಳ ಸಂದರ್ಭದಲ್ಲಿ ಅರೆಮುಳುಗಡೆ (submersible) ಪಂಪು ಅಥವಾ ಹೀರು ಕೊಳವ (suction pipe)ಯನ್ನು ತೆಗೆಯಲಾದ ನಂತರ ತಕ್ಷಣವೇ ಮಾಲೀಕ (ರೈತನನ್ನು ಹೊರತುಪಡಿಸಿ) ಅಥವಾ ಸೇವೆನೀಡಿಕೆ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಯುಕ್ತವಾಗಿ ಮುಚ್ಚತಕ್ಕದ್ದು.
(6) ಮಾಲೀಕನು ಕಾರ್ಯಾಚರಣೆಯಿಲ್ಲದ ಅಥವಾ ನಿಷ್ಕ್ರಿಯ ಕೊರೆ ಬಾವಿ ಅಥವಾ ಕೊಳವ ಬಾವಿಯನ್ನು ಪುನರುಜೀವನಗೊಳಿಸಲು ಉದ್ದೇಶಿಸಿದರೆ, ಭೂಮಿಯ ಅಥವಾ ಆವರಣಗಳ ಮಾಲೀಕನು (ರೈತನನ್ನು ಹೊರತುಪಡಿಸಿ) ಸಾವು-ನೋವುಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಅಂಥ ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ಸುರಕ್ಷಿತವಾಗಿ ಮುಚ್ಚತಕ್ಕದ್ದು ಮತ್ತು ಹೊಚ್ಚತಕ್ಕದ್ದು.
21ಬಿ. ಕೊರೆ ಬಾವಿ ಅಥವಾ ಕೊಳವೆ ಬಾವಿ ಜಾಗದಲ್ಲಿ ಸೂಚನಾಫಲಕಗಳನ್ನು ನಿಲ್ಲಿಸುವುದು. (1) ಕೊರೆಯುವ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ಕೊರೆಯುವ, ದುರಸ್ತಿಗೊಳಿಸುವ, ಪುನರುಜೀವನಗೊಳಿಸುವ ಸಮಯದಲ್ಲಿ ಕೊರೆಯುವ ಏಜೆನ್ಸಿ ಅಥವಾ ಅನುಷ್ಠಾನ ಏಜೆನ್ಸಿ ಅಥವಾ ಭೂಮಿ ಅಥವಾ ಆವರಣಗಳ ಮಾಲೀಕನ ಸಂಪೂರ್ಣ ವಿಳಾಸವನ್ನು ತೋರುವ ಸೂಚನಾಫಲಕಗಳನ್ನು ಜಾಗದ ಹತ್ತಿರ ನಿಲ್ಲಿಸತಕ್ಕದ್ದು.
21ಸಿ. ಕೊರೆ ಬಾವಿ ಅಥವಾ ಕೊಳವೆ ಬಾವಿಗಳಿಗೆ ಬೇಲಿ ಹಾಕುವುದು. (1) ಕೊರೆಯುವ ಏಜೆನ್ಸಿಯು ಕೊರೆಯುವಾಗ, ದುರಸ್ತಿಗೊಳಿಸುವಾಗ, ಪುನರುಜ್ಜಿವನಗೊಳಿಸುವಾಗ ಸಂಬಂಧಪಡದ ವ್ಯಕ್ತಿಗಳ ಅಥವಾ ಮಕ್ಕಳ ಪ್ರವೇಶವನ್ನು ತಪ್ಪಿಸಲು ಕೊರೆ ಬಾವಿ ಅಥವಾ ಕೊಳವೆ ಬಾವಿಯ ಸುತ್ತಲೂ ಮುಳ್ಳು ತಂತಿ ಬೇಲಿ ಅಥವಾ ಯಾವುದೇ ಇತರ ಸೂಕ್ತ ತಡೆಗೋಡೆಯನ್ನು ನಿಲ್ಲಿಸತಕ್ಕದ್ದು.
ಸ್ಥಳೀಯ ಪ್ರಾಧಿಕಾರಗಳ ಕರ್ತವ್ಯಗಳು
21ಡಿ. ಸ್ಥಳೀಯ ಪ್ರಾಧಿಕಾರಗಳ ಕರ್ತವ್ಯಗಳು.- (1) ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಗ್ರಾಮ ಪಂಚಾಯತಿ, ಗ್ರಾಮ ಆಡಳಿತಾಧಿಕಾರಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಗರ ಪಾಲಿಕೆಗಳು ಮತ್ತು ಸಂದರ್ಭಾನುಸಾರವಾಗಿ ಪುರಸಭೆಗಳಂತಹ ಸಂಬಂಧಪಟ್ಟ ನಗರ ಸ್ಥಳೀಯ ಪ್ರಾಧಿಕಾರಗಳು ಮತ್ತು ಮಂಡಳಿಗಳ ಕಿರಿಯ ಎಂಜಿನಿಯರುಗಳು ಕೊರಸಲಾದ ಕೊರ ಬಾವಿ ಅಥವಾ ಕೊಳವೆ ಬಾವಿಗಳ ಮೇಲೆ ನಿಗಾ ಇಡತಕ್ಕದ್ದು ಮತ್ತು ವಿಫಲಗೊಂಡ ಅಥವಾ ಬಿಟ್ಟುಬಿಟ್ಟ ಅಥವಾ ನಿಷ್ಕ್ರಿಯಗೊಂಡ ಕೊರೆ ಬಾವಿಗಳು ಅಥವಾ ಕೊಳವೆ ಬಾವಿಗಳನ್ನು ಮಾನವ ಸಾವು-ನೋವುಗಳನ್ನು ಖಚಿತಪಡಿಸಿಕೊಳ್ಳತಕ್ಕದ್ದು. ತಡೆಯಲು ಯುಕ್ತವಾಗಿ ಮುಚ್ಚಲಾಗಿದೆಯೇ ಎಂಬುದನ್ನು
(2) ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ, ಸಂಬಂಧಪಟ್ಟ ನಗರ ಸ್ಥಳೀಯ ಪ್ರಾಧಿಕಾರಗಳ ಕಿರಿಯ ಎಂಜಿನಿಯರುಗಳು ಅಥವಾ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳು ಕೊರೆ ಬಾವಿಗಳು ಅಥವಾ ಕೊಳವೆ ಬಾವಿಗಳ ಸಂಬಂಧದಲ್ಲಿ ನಿರ್ದಿಷ್ಟಪಡಿಸಿದ ನಮೂನೆಯ ಅನುಸಾರವಾಗಿ ಒಂದು ವಹಿಯನ್ನು ನಿರ್ವಹಿಸತಕ್ಕದ್ದು ಮತ್ತು ಅಂತರ್ಜಲ ಪ್ರಾಧಿಕಾರ ಅಥವಾ 21ಎ ಪ್ರಕರಣದಡಿ ಈ ಕುರಿತು ಪ್ರಾಧೀಕರಿಸಿದ ಯಾರೇ ಅಧಿಕಾರಿಗೆ ತ್ರೈಮಾಸಿಕ ವರದಿಯನ್ನು ಸಲ್ಲಿಸತಕ್ಕದ್ದು.
(3) ಕುಡಿಯುವ ನೀರು ಅಥವಾ ನೀರಾವರಿ ಅಥವಾ ವಾಣಿಜ್ಯ ಸೋಮುಗಳ ಅನುಷ್ಠಾನ ಏಜೆನ್ಸಿಯ ಪ್ರಭಾರೆಯಲ್ಲಿರುವ ಅಧಿಕಾರಿಯು, ಕಾರ್ಯಾಚರಣೆಯಲ್ಲಿರುವ ಕೊರೆ ಬಾವಿಗಳು ಅಥವಾ ಕೊಳವ ಬಾವಿಗಳನ್ನು ಸುರಕ್ಷಿತವಾಗಿ ಹೊಚ್ಚಲಾಗಿದೆ ಎಂಬುದನ್ನು ಖಚಿತಪಡಿಕೊಳ್ಳತಕ್ಕದ್ದು.
(4) ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಪಂಚಾಯತಿ ಕಛೇರಿಯ ಆವರಣಗಳಲ್ಲಿ ಯಶಸ್ವಿಯಾದ ಅಥವಾ ವಿಫಲವಾದ ಅಥವಾ ಬಿಟ್ಟುಬಿಟ್ಟ ಅಥವಾ ನಿಷ್ಕ್ರಿಯಗೊಂಡ ಅಥವಾ ಅಪೂರ್ಣವಾಗಿ ಕೊರೆಯಲಾದ ಕೊರೆ ಬಾವಿ ಅಥವಾ ಕೊಳವ ಬಾವಿಯ ಸಂಬಂಧದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕನ್ನಡ ಭಾಷೆಯಲ್ಲಿ ಫಲಕವನ್ನು ಪ್ರದರ್ಶಿಸತಕ್ಕದ್ದು.
7. ಪ್ರಕರಣ 32ರ ತಿದ್ದುಪಡಿ.- ಮೂಲ ಅಧಿನಿಯಮದ 32ನೇ ಪ್ರಕರಣದ (4)ನೇ ಉಪ-
ಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:- “(4) ಉಪ-ಪ್ರಕರಣ (1)ರಲ್ಲಿ ನಮೂದಿಸಿರುವುದರ ಹೊರತಾಗಿ, ನೋಂದಣಿ ಪ್ರಮಾಣ ಪತ್ರದ ಷರತ್ತುಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿ ಅಥವಾ ಕೊರೆಯುವ ಅಥವಾ ಅಗೆಯುವ ಏಜೆನ್ಸಿಯು ಹತ್ತು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ಅಥವಾ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಕಾರವಾಸದೊಂದಿಗೆ ದಂಡಿತನಾಗತಕ್ಕದ್ದು, ತರುವಾಯದ ಅಥವಾ ಮುಂದುವರೆದ ವೈಫಲ್ಯ ಅಥವಾ ಉಲ್ಲಂಘನೆಯ ಸಂದರ್ಭದಲ್ಲಿ, ಪ್ರಾಧಿಕಾರವು ಅಥವಾ ಈ ಅಧಿನಿಯಮದಡಿ ಯಾವುದೇ ಅಧಿಕಾರಗಳನ್ನು ಚಲಾಯಿಸಲು ಅದು ಪ್ರಾಧಿಕರಿಸಿದ ಯಾರೇ ಇತರ ವ್ಯಕ್ತಿಯು ನಿಯಮಿಸಬಹುದಾದ ರೀತಿಯಲ್ಲಿ ಕೊರೆಯುವ ಅಥವಾ ಅಗೆಯುವ ಉಪಕರಣ ಅಥವಾ ಯಂತ್ರವನ್ನು ಸ್ವಾಧೀನಪಡಿಸಿಕೊಳ್ಳಬಹುದು.” ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ
8. ಹೊಸ ಪ್ರಕರಣ 32ಎ ಸೇರ್ಪಡೆ.-
(1) ಮೂಲ ಅಧಿನಿಯಮದ 32ನೇ ಪ್ರಕರಣದ
ತರುವಾಯ ಈ ಮುಂದಿನ ಹೊಸ ಪ್ರಕರಣವನ್ನು ಸೇರಿಸತಕ್ಕದ್ದು ಎಂದರೆ:-
“32ಎ. ಶಿಕ್ಷೆ ಮತ್ತು ದಂಡನೆಗಳು. (1) ಪ್ರಕರಣ 11ಎ-ರ ಉಪಬಂಧಗಳನ್ನು ಯಾರೇ
ವ್ಯಕ್ತಿಯು ಉಲ್ಲಂಘಿಸಿದರೆ ಮೂರು ತಿಂಗಳುಗಳ ಅವಧಿಯವರೆಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಅಥವಾ ಐದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು.
(2) ಪ್ರಕರಣ 21ಎ-ರ ಉಪಬಂಧಗಳನ್ನು ಯಾರೇ ವ್ಯಕ್ತಿಯು ಉಲ್ಲಂಘಿಸಿದರೆ ಆರು ತಿಂಗಳುಗಳ ಅವಧಿಯವರೆಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು.
(3) ಪ್ರಕರಣ 21ಎ-ರ ಉಪಬಂಧಗಳನ್ನು ಪಾಲಿಸುವ ಸಂಬಂಧ ಕೊರೆಯುವ ಮತ್ತು ಸೇವೆನೀಡಿಕೆ ಏಜೆನ್ಸಿಗಳ ವೈಫಲ್ಯಕ್ಕಾಗಿ ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಮತ್ತು ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು.
(4) ಯಾವುದೇ ಕೊರೆಯುವ ಮತ್ತು ಸೇವೆನೀಡಿಕೆ ಏಜೆನ್ಸಿಯು ಪ್ರಕರಣ 21ಬಿ ಮತ್ತು 21ಸಿರ ಅಡಿಯಲ್ಲಿ ಕರ್ತವ್ಯಗಳನ್ನು ಪಾಲಿಸಲು ವಿಫಲವಾದರೆ, ಮೂರು ತಿಂಗಳ ಅವಧಿಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಮತ್ತು ಐದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು.