ಬೆಂಗಳೂರು : ಕನ್ನಡದ ಪಾರು ಧಾರವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ಅವರು ಚಿಕಿತ್ಸೆ ಫಲಿಸದೇ ತಡರಾತ್ರಿ ನಿಧನರಾಗಿದ್ದಾರೆ.
ನಟ ಶ್ರೀಧರ್ ನಾಯಕ್ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಬೆಂಗಳೂರಿನ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸಹಾಯ ಮಾಡುವಂತೆ ಅನೇಕರು ಕೋರಿಕೊಂಡಿದ್ದರು. ಆದರೆ ಮೇ 26ರ ತಡರಾತ್ರಿ ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.