ಮೈಸೂರು : ನಾಡಹಬ್ಬ ಮೈಸೂರು ದಸರಾಗೆ ಬಂದಿದ್ದ ಆನೆಗಳ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಂಜನ್ ಹಾಗೂ ಧನಂಜಯ್ ಆನೆಗಳು ಅಮಮನೆಯಿಂದ ಹೋರಗೆ ಓಡಿ ಹೋಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ 7.45 ರ ಸುಮಾರಿಗೆ ಆಹಾರ ತಿನ್ನುವ ಸಂದರ್ಬದಲ್ಲಿ ಧನಂಜಯ ಹಾಗೂ ಕಂಜನ್ ಅನೆಗಳ ನಡುವೆ ಗಲಾಟೆ ಶುರವಾಗಿದ್ದು, ಅರಮನೆಯ ಜಯ ಮಾರ್ತಾಂಡ ಬಳಿ ಏಕಾಏಕಿ ಕಂಜನ್ ಹಾಗೂ ಧನಂಜಯ ಆನೆಗಳು ಓಡುತ್ತಾ ಹೊರಬಂದವು. ಮಾವುತನಿಲ್ಲದ ಕಂಜನ್ ಆನೆಯನ್ನು ಕಂಡು ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಎರಡೂ ಆನೆಗಳು ದೊಡ್ಡಕೆರೆ ಮೈದಾನದ ಬಳಿಕ ಬ್ಯಾರಿಕೇಟ್ ತಳ್ಳಿಕೊಂಡು ರಸ್ತೆಗೆ ನುಗ್ಗಿವೆ. ತಕ್ಷಣ ಜಾಗೃತರಾದ ಮಾವುತರು ಹಾಗೂ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಮೂಲಕ ಭಾರೀ ಅನಾಹುತ ತಪ್ಪಿತು. ಬಳಿಕ ಆನೆಗಳನ್ನ ಅರಮನೆಗೆ ಕರೆತರಲಾಗಿದ್ದು, ಸದ್ಯ ಕೋಡಿಸೋಮೇಶ್ವರ ದೇವಸ್ಥಾನ ಸಮೀಪ ಇರುವ ಆನೆಗಳು.
Latest from Mysuru, Karnataka 😊 pic.twitter.com/KPIlqIGfIy
— Rachit (@gupt_rach) September 20, 2024