ಬೆಂಗಳೂರು : ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದ ಪಾಕಿಸ್ತಾನದ 14 ಪ್ರಜೆಗಳನ್ನು ಜಿಗಣಿ ಪೊಲೀಸರು ಭರ್ಜರಿ ಕಾರ್ಯಾಚಾರಣೆ ನಡೆಸುವ ಮೂಲಕ ಬಂಧಿಸಿದ್ದಾರೆ.
ದೇಶದ ನಾನಾ ಭಾಗಗಳ್ಲಿ ಅಡಗಿ ಕುಳಿತಿದ್ದ 14 ಪಾಕಿಸ್ತಾನದ ಮೂಲದ ಪ್ರಜೆಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತ ಪಾಕ್ ಪ್ರಜೆಗಳ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗಣಿ ಪೊಲೀಸರು ಇತ್ತೀಚೆಗಷ್ಟೇ ಪ್ರಮುಖ ಆರೋಪಿ ಫರ್ವೇಜ್ ನನ್ನು ಬಂಧಿಸಿದ್ದರು. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮೆಹದಿ ಪೌಂಡೇಷನ್ ಸಂಸ್ಥೆಯ ಪ್ರಮುಖ ನಾಯಕನಾಗಿದ್ದ ಆರೋಪಿ ಫರ್ವೇಜ್, ಪಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬರಲು ನೆರವು ನೀಡಿದ್ದ. ಬಂಧಿತರ ಪಾಕ್ ಪ್ರಜೆಗಳಿಗೆ ಭಾರತೀಯ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದ. ಯೂನಸ್ ಆಲ್ಗೋರ್ ಧರ್ಮಗುರುವಿನ ಪ್ರಚಾರಕನಾಗಿದ್ದ ಫರ್ವೇಜ್, ಯೂನಸ್ ಆಲ್ಗೋರ್ ಸೂಚನೆಯಂತೆ ಪಾಕ್ ಪ್ರಜೆಗಳನ್ನು ಭಾರತಕ್ಕೆ ಕರೆಸಿದ್ದ ಎನ್ನಲಾಗಿದೆ. ಇದೀಗ ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದ 14 ಪಾಕ್ ಪ್ರಜೆಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.